ಕುಮಟಾ : ಶ್ರೀ ಶಾಂತಿಕಾ ಪರಮೇಶ್ವರಿ ವಾಲಿಬಾಲ್ ಕಮಿಟಿ, ಶ್ರೀ ಶಾಂತಿಕಾ ಪರಮೇಶ್ವರಿ ಹಾಲಕ್ಕಿ ಗೆಳೆಯರ ಬಳಗ ಹಾಗೂ ಸಾಂತಗಲ್ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ 12 ನೇ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು 11-11-17 ರಂದು ಸಾಂತಗಲ್ ನ ಶ್ರೀ ಶಾಂತಿಕಾ ಪರಮೇಶ್ವರಿ ಕ್ರೀಡಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಕಾಂಗ್ರೆಸ ಮುಖಂಡರಾದ ರವಿಕುಮಾರ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರೂ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಹಾಲಕ್ಕಿ ಸಮಾಜದವರಿಂದ ಇಂತಹ ಕ್ರೀಡಾ ಚಟುವಟಿಕೆ ನಡೆಯುತ್ತಿರುವುದು ಶ್ಲಾಘನೀಯ ಎಂದರು.

RELATED ARTICLES  ಹುಲ್ಲಿನ ಗೊಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು : ಸುಟ್ಟು ಭಸ್ಮವಾಯ್ತು 40 ಸಾವಿರ ರೂಪಾಯಿಗಳ ಹುಲ್ಲು

20171111 225026

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಾಗರಾಜ ನಾಯಕ ತೊರ್ಕೆಯವರು ಹಿಂದುಳಿದ ಸಮಾಜ, ಅತಿ ಹಿಂದುಳಿದ ಪ್ರದೇಶವಾದ ಸಾಂತಗಲ್ ನಲ್ಲಿ ಹಾಲಕ್ಕಿ ಸಮಾಜದವರೇ ಅತ್ಯಂತ ನಿಷ್ಠೆಯಿಂದ ಸರ್ವ ಪ್ರಯತ್ನದ ಮೂಲಕ ಉತ್ತಮ ರೀತಿಯಲ್ಲಿ ಪಂದ್ಯಾವಳಿಯನ್ನು ಸಂಘಟಿಸಿದ್ದಾರೆ. ಶಿಕ್ಷಣದಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ನೀಡಬೇಕು. ಮನುಷ್ಯ ಆರೋಗ್ಯದಿಂದಿರಲು ಕ್ರೀಡೆಗಳು ಅಗತ್ಯವಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ, ದೈಹಿಕ ಸದೃಢತೆಯೊಂದಿಗೆ ಮನಸ್ಸು ಉಲ್ಲಾಸದಿಂದಿರುತ್ತದೆ. ಇದೇ ವೇದಿಕೆಯಲ್ಲಿ ನಾಟಿವೈದ್ಯರು ಹಾಗೂ ರಾಜ್ಯಮಟ್ಟದ ಕ್ರೀಡಾ ಸಾಧಕರನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ಈ ಬಾಲಕನಿಗೆ ಸರಿಯಾದ ಮಾರ್ಗದರ್ಶನ, ತರಬೇತಿ ಸಿಕ್ಕಿದಲ್ಲಿ ಈತನೊಬ್ಬ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವಿದೆ. ಈ ಬಾಲಕನಿಗೆ ತಮ್ಮಿಂದ ಸಂಪೂರ್ಣ ಸಹಾಯ ದೊರೆಯಲಿದೆ ಎಂದು ನುಡಿದು ಸಂಘಟಕರಿಗೆ ಶುಭ ಹಾರೈಸಿದರು.

RELATED ARTICLES  ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದ ಪುಟಾಣಿ ಸಿಂಚನಾ ಭಟ್ಟ

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಮಹೇಶ ಅಚ್ಯುತ ನಾಯ್ಕ, ಸೂರಜ ನಾಯ್ಕ ಸೋನಿ, ದಿನಕರ ಶೆಟ್ಟಿ, ಪ್ರದೀಪ ನಾಯಕ, ಮುಜಾಫರ್ ಶೇಖ, ಗಿರಿಯಾ ಎನ್. ಗೌಡ, ಶ್ರೀಮತಿ ಪಾರ್ವತಿ ಹುಲಿಯಪ್ಪ ಗೌಡ, ವಿನಾಯಕ ಭಟ್ಟ, ಗಿರಿಯಾ ರಾಮ ಗೌಡ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.