ಕುಮಟಾ : ಟಿಪ್ಪುಸುಲ್ತಾನ್ ಹುಲಿಯಲ್ಲ ಬದಲಾಗಿ ಇಲಿಗೂ ಸಮನಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಟೀಕಿಸಿದ್ದಾರೆ.

ನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಟಿಪ್ಪು ಜಯಂತಿ ಆಚರಣೆ ನಡೆಸಬಾರದೆಂದು ರಾಜ್ಯ ಸರ್ಕಾರಕ್ಕೆ ಸತತ ಮನವಿ ಮಾಡಿದರೂ ಸರ್ಕಾರ ಜಯಂತಿಯನ್ನು ನಡೆಸಿದೆ. ಕರ್ನಾಟಕ ಸರ್ಕಾರ ಟಿಪ್ಪುವನ್ನು ಮೈಸೂರಿನ ಹುಲಿ ಎನ್ನುತ್ತಿದೆ. ಆದರೆ ಆ ನನ್ನ ಮಗನಿಗೆ ಇಲಿಯ ಯೋಗ್ಯತೆಯು ಇಲ್ಲ ಎಂದು ಕಿಡಿಕಾರಿದರು. ಅಕ್ಬರ್ ಈ ದೇಶದ ಮಹಾನ್ ಪುರುಷ ಎನ್ನುವ ಸುಳ್ಳು ಇತಿಹಾಸವನ್ನು ಜನರ ತಲೆಯಲ್ಲಿ ತುಂಬುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಕಾಂಗ್ರೆಸ್ ನಲ್ಲಿ ಒಳ್ಳೆಯ ಜನ ಇದ್ದಾರೆ, ಸ್ವಾಭಿಮಾನ ಇದ್ದವರು ಇಟಲಿ ಪಕ್ಷವನ್ನು ಬಿಟ್ಟು ಭಾರತದ ಬಿಜೆಪಿಗೆ ಬನ್ನಿ ನಿಮ್ಮ ಸ್ವಾಭಿಮಾನಕ್ಕೆ ತಕ್ಕಂತೆ ನಾವು ಅವಕಾಶ ನೀಡುತ್ತೇವೆ ಎಂದರು.

RELATED ARTICLES  ದೀವಗಿಯಲ್ಲಿ ಮೃತ ಬಾಲಕನ ಶವ ಪತ್ತೆ