ಕಾರವಾರ:ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೆ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಹುದ್ದೆ ಸೃಜಿಸಿ ನೇಮಕಾತಿ ವಿಧಾನ ನಿರ್ದಷ್ಟಪಡಿಸಿರುವ ಆದೇಶದನ್ವಯ ಜಿಲ್ಲೆಯ 11 ತಾಲೂಕುಗಳ ಗ್ರಾಮ ಪಂಚಾಯತ್‍ಗಳಿಗೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಾರವಾರ ತಾಲೂಕಿನ ಅಮದಳ್ಳಿ, ಅಸ್ನೋಟಿ, ಚೆಂಡಿಯಾ, ಚಿತ್ತಕುಲಾ, ದೇವಳಮಕ್ಕಿ, ಛಾಡಸಾಯಿ, ಗೋಟೆಗಾಳಿ, ಹಣಕೋಣ, ಕಡವಾಡ, ಕದ್ರಾ, ಕೇರವಾಡಿ, ಕಿನ್ನರ, ಮಾಜಾಳಿ, ಮಲ್ಲಾಪುರ, ಮುಡಗೇರಿ, ಶಿರವಾಡ, ತೋಡುರು, ವೈಲವಾಡಾ ್ರ ಒಟ್ಟು 18 ಗ್ರಾಮ ಪಂಚಾಯತಿಗಳು, ಕುಮಟಾ ತಾಲೂಕಿನ ಅಳಕೋಡ, ಬಾಡ, ಬರ್ಗಿ, ದಿವಗಿ, ದೇವಗಿರಿ, ಗೋಕರ್ಣ, ಹೆಗಡೆ, ಹನೇಹಳ್ಳಿ, ಹೊಲನಗದ್ದೆ, ಹಿರೇಗುತ್ತಿ, ಕಾಗಾಲ, ಕಲಭಾಗ, ಕಲ್ಲಬ್ಬೆ, ಕೋಡ್ಕಣಿ, ಕೂಜಳ್ಳಿ, ಮಿರ್ಜಾನ, ಮೂರೂರು, ನಾಡುಮಾಸ್ಕೇರಿ, ಸಂತೇಗುಳಿ, ಸೊಪ್ಪಿನಹೊಸಳ್ಳಿ, ತೊರ್ಕೆ, ವಾಲಗಳ್ಳಿ, ಒಟ್ಟು 22 ಪಂಚಾಯಿತಿಗಳು, ಹೊನ್ನವರ ತಾಲೂಕಿನ ಬಳಕೂರ, ಚಿಕ್ಕನಕೋಡ, ಹಡಿನಬಾಳ, ಹೆರಂಗಡಿ, ಜಲವಳ್ಳಿ, ಕಾಸರಕೋಡ, ಕೆಳಗಿನೂರ, ಖರ್ವಾ, ಕೊಡಾಣಿ, ಕುದ್ರ್ರಿಗಿ, ಮಂಕಿ, ಮಾವಿನಕುರ್ವಾ, ಮೇಲಿನ ಇಡಗುಂಜಿ, ನಗರಬಸ್ತಿಕೇರಿ, ಉಪ್ಪೋಣಿ, ಹಳೇಮಠ, ಆನಂತವಾಡಿ, ಚಿತ್ತಾರ, ಮಾಗೋಡ, ಚಂದಾವರ, ಹಳದೀಪುರ, ಹೊಸಾಕುಳಿ, ಕಡತೋಕಾ, ಕಡ್ಲೆ, ಕರ್ಕಿ, ಮುಗ್ವಾ, ನವಿಲಗೋಣ, ಸಾಲಕೋಡ ಒಟ್ಟು 28 ಗ್ರಾಮ ಪಂಚಾಯತಿಗಳು, ಭಟ್ಕಳ ತಾಲೂಕಿನ ಬೈಲೂರ, ಮಾವಳ್ಳಿ-1, ಕೈಕಿಣಿ, ಮವಳ್ಳಿ-2,(ಮುರ್ಡೇಶ್ವರ), ಬೇಂಗ್ರೆ, ಶಿರಾಲಿ, ಕೊಪ್ಪ, ಹೆಬಳೆ, ಮಾವಿನಕುರ್ವೆ, ಮುಂಡಳ್ಳಿ, ಮುಟ್ಟಳ್ಳಿ, ಯಲ್ವಡಿಕವೂರ, ಬೆಳಕೆ, ಕೋಣಾರ, ಮಾರುಕೇರಿ, ಹಾಡವಳ್ಳಿ, ಒಟ್ಟು 16 ಗ್ರಾಮ ಪಂಚಾಯತಿಗಳು, ಶಿರಸಿ ತಾಲೂಕಿನ ಒಟ್ಟು 32 ಗ್ರಾಮ ಪಂಚಾಯತಿಗಳು, ಸಿದ್ದಾಪುರ ತಾಲೂಕಿನ ಅಣಲೇಬೈಲ್, ಹಸರಗೋಡ, ಹೆಗ್ಗ್ರರಣಿ, ನಿಲ್ಕುಂದ, ಕಾನಸೂರು, ತ್ಯಾಗಲಿ, ಹಾರ್ಸಿಕಟ್ಟಾ, ಬಿದ್ರಕಾನ, ಕೋಲಸಿರ್ಸಿ, ಕಾನಗೋಡ, ಕಾಂವಚೂರು, ಶಿರಳಗಿ, ಹಲಗೇರಿ, ಬೇಡ್ಕಣಿ, ಮನ್ಮನೆ, ಇಟಗಿ, ಬಿಳಗಿ, ಕ್ಯಾದಗಿ, ಸೋವಿನಕೊಪ್ಪ, ದೂಡ್ಮನಿ, ವಾಜಗೋಡ, ತಂಡಾಗಂಡಿ, ಕೊರ್ಲಕೈ(ಆಡುಕಟ್ಟಾ) ಒಟ್ಟು 23 ಗ್ರಾಮ ಪಂಚಾಯತಿಗಳು, ಯಲ್ಲಾಪುರ ತಾಲೂಕಿನ ಒಟ್ಟು 15 ಗ್ರಾಮ ಪಂಚಾಯತಿಗಳು, ಮುಂಡಗೋಡ ತಾಲೂಕಿನ ಬಾಚಣಕಿ, ಇಂದೂರ, ಹುನಗುಂದ, ನಂದಿಕಟ್ಟಾ, ಗುಂಜಾವತಿ, ಮೈನಳ್ಳಿ, ಚವಡಳ್ಳಿ, ಸಾಲಗಾಂವ, ಚಿಗಳ್ಳಿ, ಕಾತೂರ, ಪಾಳಾ, ಮಳಗಿ, ನಾಗನೂರ, ಓರಲಗಿ, ಕೊಡಂಬಿ, ಬೆಡಸಗಾಂವ, ಒಟ್ಟು 16 ಗ್ರಾಮ ಪಂಚಾಯತಿಗಳು, ಹಳಿಯಾಳ ತಾಲೂಕಿನ ಒಟ್ಟು 24 ಗ್ರಾಮ ಪಂಚಾಯತಿಗಳು, ಜೋಯಿಡಾ ತಾಲೂಕಿನ ಒಟ್ಟು 16 ಗ್ರಾಮ ಪಂಚಾಯಿಗಳಿಗೆ ತಲಾ ಒಂದರಂತೆ ಡಾಟಾ ಎಂಟ್ರಿ ಆಪರೇಟರ್‍ಗಳನ್ನು ನೇಮಕ ಮಾಡಲಾಗುವದು.
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಆಯಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸತಕ್ಕದು ಅರ್ಜಿ ಸಲ್ಲಿಸಲು ನವ್ಹಂಬರ 30 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ರೂ.150/ ರ ಡಿ.ಡಿ.ಯನ್ನು ಪೋಸ್ಟಲ್ ಆರ್ಡರ ಮೂಲಕ ಪಾವತಿಸುವದು. ಅರ್ಜಿ ನೂಮೂನೆ ಮತ್ತು ವೇಳಾ ಪಟ್ಟಿ ವಿವಿರಗಳನ್ನು drdpr.kar.nic.inನಲ್ಲಿ ಹಾಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳಿಂದ ಪಡೆಯಬಹುದಾಗಿದೆ.