ಸಕ್ಕರೆಯಿಂದ ಕ್ಯಾನ್ಸರ್‌ ಕೋಶಗಳು ಸಕ್ರಿಯವಾಗುತ್ತವೆ ಹಾಗೂ ಟ್ಯೂಮರ್‌ ಹೆಚ್ಚುತ್ತದೆ ಎಂಬುದನ್ನು ಒಂಭತ್ತು ವರ್ಷಗಳ ಸಂಶೋಧನೆಯ ಮೂಲಕ ಸಂಶೋಧಕರು ಕಂಡುಹಿಡಿದಿದ್ದಾರೆ. ಸಕ್ಕರೆ ಸೇವನೆ ಮಾಡಿದರೆ ಮಧುಮೇಹ ಅಥವಾ ಬೊಜ್ಜಿನ ಸಮಸ್ಯೆ ಕಾಡುತ್ತದೆ ಎಂದು ಮಾತ್ರ ಜನರಿಗೆ ತಿಳಿದಿದೆ. ಆದರೆ ಒಂದು ಶೋಧದಲ್ಲಿ ಸಕ್ಕರೆ ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಕ್ಯಾನ್ಸರ್‌ ಸಮಸ್ಯೆ ಕಾಡುತ್ತದೆ ಎಂದು ತಿಳಿದು ಬಂದಿದೆ.

ಸಕ್ಕರೆ ಸೇವನೆಯಿಂದ ಕ್ಯಾನ್ಸರ್‌ ಕೋಶಗಳನ್ನು ಸಕ್ರಿಯಗೊಳಿಸಿ ರೋಗಿಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇದನ್ನು ಮೂರು ಡಚ್‌ ವಿಶ್ವವಿದ್ಯಾಲಯನ ವಿಜ್ಞಾನಿಗಳು 2008ರಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

RELATED ARTICLES  ನಿಮ್ಮ ದೇಹದ ತೂಕ ಎಷ್ಟು? ನೀವೆಷ್ಟು ನೀರು ಕುಡಿಯಬೇಕು?

ಈ ಸಂಶೋಧನೆಯ ಆಳವಾದ ಅಧ್ಯಯನವನ್ನು ಬಾರ್ಬರ್ಗ್‌ ನಡೆಸಿದ್ದಾರೆ. ಬಾರ್‌ಬರ್ಗ್‌ ಜರ್ಮನ್‌ನ ವಿಜ್ಞಾನಿಯಾಗಿದ್ದರು. ಇವರು 1920 ರಲ್ಲಿ ತಮ್ಮ ಒಂದು ಅಧ್ಯಯನದಲ್ಲಿ ತಿಳಿಸಿದಂತೆ ಕ್ಯಾನ್ಸರ್‌ ಕೋಶಗಳು ಸಕ್ಕರೆ ಅಥವಾ ಗ್ಲೈಕೋಸಿಸ್‌ನ ಕಾರಣದಿಂದಾಗಿ ಹೆಚ್ಚು ಶಕ್ತಿ ಉತ್ಪತ್ತಿ ಮಾಡುತ್ತವೆ. ಈ ವರದಿಯನ್ನು ಬಾರ್‌ಬರ್ಗ್‌ ಪ್ರಭಾವ ಎಂದು ಕರೆಯಲಾಗುತ್ತದೆ.

RELATED ARTICLES  ಗ್ಯಾಸ್ಟ್ರಿಕ್ ಸಮಸ್ಯೆ .. ನಿಮಗೆಷ್ಟು ಗೊತ್ತು..?

ಸಂಶೋಧನೆಯಲ್ಲಿ ತಿಳಿದು ಬಂದಂತೆ ಟ್ಯೂಮರ್‌ ಸಕ್ಕರೆಯನ್ನು ಅಧಿಕ ಪ್ರಮಾಣದಲ್ಲಿ ಲೆಕ್ಟಿಕ್‌ ಆಸಿಡ್‌ ಆಗಿ ಪರಿವರ್ತಿಸುತ್ತದೆ. ನಂತರ ನಡೆಸಿದ ಅಧ್ಯಯನದಲ್ಲಿ ಸಕ್ಕರೆ ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿದರೆ ಕ್ಯಾನ್ಸರ್‌ ಟ್ಯೂಮರ್‌ ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಸಂಶೋಧನೆ ನೇಚರ್‌ ಕಮ್ಯೂನಿಕೇಶನ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ. ವಿಜ್ಞಾನಿಗಳು ಹೇಳುವಂತೆ ಸಕ್ಕರೆಯು ಕ್ಯಾನ್ಸರ್‌ ಟ್ಯೂಮರ್‌ಗಳನ್ನು ಹೆಚ್ಚಿಸುವುದರ ಜೊತೆಗೆ, ಅದರ ಚಿಕಿತ್ಸೆಯನ್ನು ಸಹ ಮಾಡಲು ಸಾಧ್ಯವಾಗದಷ್ಟು ಗಂಭೀರವಾಗುತ್ತದೆ