ಕುಂಬಳೆಃ- ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ 14-11-2017 ರಂದು ಮಕ್ಕಳ ದಿನಾಚರಣೆಯಂಗವಾಗಿ ಶಾಲಾಮಕ್ಕಳಿಂದ ಅವರವರ ಮಾತಾ-ಪಿತೃ ಪೂಜನ ಕಾರ್ಯಕ್ರಮ ನೆರವೇರಿತು.
ಮಾತಾ-ಪಿತರನ್ನು ಸಭಾಂಗಣದಲ್ಲಿ ಸಾಲಾಗಿ ಉಚಿತಾಸನದಲ್ಲಿ ಕುಳ್ಳಿರಿಸಿ, ಅವರ ಮುಂದೆ ಹೂ ಹಾಗೂ ಕುಂಕುಮದೊಂದಿಗೆ ಮಕ್ಕಳನ್ನೂ ಚಾಪೆಯಲ್ಲಿ ಕುಳ್ಳಿರಿಸಲಾಯ್ತು. ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರಾಸರಸ್ವತಿಯವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಗೊಂಡಿತು.
ಸಾಮೂಹಿಕ ಗುರುವಂದನೆ-ಪ್ರಾರ್ಥನೆ ಜರಗಿದ ಮೇಲೆ ವಿಶ್ವಮಾತಾ ಪಿತೃಗಳಾದ ಪಾರ್ವತೀ ಪರಮೇಶ್ವರರ ಕುರಿತು ಶ್ಲೋಕ ಹಾಡಿಸಲಾಯ್ತು. ಮುಂದೆ ಮಕ್ಕಳು ಅವರವರ ಮಾತಾ ಪಿತರಿಗೆ ಕುಂಕುಮ ಹಚ್ಚಿ ಹೂಗಳಿಂದ ಪೂಜೆ ಸಲ್ಲಿಸಿದರು. ಮುಂದೆ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿಸಲಾಯ್ತು.
ಶ್ರೀಪಾರ್ವತೀ ಪರಮೇಶ್ವರರಿಗೆ ಹಾಗೂ ಶ್ರೀರಾಘವೇಶ್ವರ ಬಾರತೀ ಸ್ವಾಮಿಗಳವರ ಭಾವ ಚಿತ್ರಕ್ಕೆ ಶಾಲಾ ಆಢಳಿತಾಧಿಕಾರಿಗಳಾದ ಶ್ಯಾಂಭಟ್ ದರ್ಭೆಮಾರ್ಗ ಅವರು ಆರತಿ ಬೆಳಗಿದರು. ಮುಂದೆ ಸಂಸ್ಕೃತ ಅಧ್ಯಾಪಕರಾದ ಡಾ| ಸದಾಶಿವಭಟ್ ಮಾತಾ-ಪಿತೃ ಪೂಜನೆಯ ಕುರಿತು ಸಭೆಗೆ ಪ್ರವಚನ ನೀಡಿದರು. ಶ್ಯಾಂಭಟ್ ದರ್ಭೆಮಾರ್ಗ ಕಾರ್ಯಕ್ರಮ ನಿರ್ವಹಣೆ ಗೈದರು. ಕಾರ್ಯಕ್ರಮಕ್ಕೆ 180ಕ್ಕೂ ಅಧಿಕ ಮಾತಾಪಿತ ಪೂಜನೀಯರು ಆಗಮಿಸಿ ಕಾರ್ಯಕ್ರಮ ಚಂದಗಾಣಿಸಿದರು.