ಮುಂಬೈ: ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರಿಗೆ ಸೆಂಟ್ರಲ್‌ ರೈಲ್ವೆ ಬಿಸಿ ಮುಟ್ಟಿಸಿದೆ. ಕಳೆದ 7 ತಿಂಗಳ ಅವಧಿಯಲ್ಲಿ ಕಾರ್ಯಾಚರಣೆ ಕೈಗೊಂಡು ಟಿಕೆಟ್‌ ರಹಿತವಾಗಿ ಪ್ರಯಾಣಿಸುತ್ತಿದ್ದವರಿಗೆ ದಂಡ ಹಾಕಿ, ದಾಖಲೆಯ 100.67 ಕೋಟಿ ರೂಪಾಯಿ ಸಂಗ್ರಹಿಸಿದೆ.

2017ರ ಏಪ್ರಿಲ್‌ನಿಂದ ಅಕ್ಟೋಬರ್‌ ಮಧ್ಯೆ ಸೆಂಟ್ರಲ್‌ ರೈಲ್ವೆಯ ವಾಣಿಜ್ಯ ವಿಭಾಗ ರೈಲಿನಲ್ಲಿ ಟಿಕೆಟ್‌‌ ಇಲ್ಲದೇ ಪ್ರಯಾಣಿಸುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಈ ಅವಧಿಯಲ್ಲಿ ದಾಖಲೆಯ 100.67 ಕೋಟಿ ರೂಪಾಯಿ ದಂಡ ಸಂಗ್ರಹಿಸಿದೆ. ಜೊತೆಗೆ ಟಿಕೆಟ್‌ ರಹಿತ ಹಾಗೂ ಅಕ್ರಮ ಪ್ರಯಾಣದ 19.82 ಲಕ್ಷ ಕೇಸ್‌ಗಳನ್ನು ದಾಖಲಿಸಿದೆ.

RELATED ARTICLES  ಮೀನು ಮಾರುಕಟ್ಟೆ ಕಾಮಗಾರಿ ವಿಳಂಬ: ಮೀನು ಮಾರಾಟಗಾರರ ಪ್ರತಿಭಟನೆ.

ಕಳೆದ ವರ್ಷ ಇದೇ ಅವಧಿಯಲ್ಲಿ 80.02 ಕೋಟಿ ರೂಪಾಯಿ ದಂಡ ಸಂಗ್ರಹವಾಗಿತ್ತು. 16.37 ಕೇಸ್‌ಗಳು ದಾಖಲಾಗಿದ್ದು, ಈ ಬಾರಿ ದಂಡ ಸಂಗ್ರಹದಲ್ಲಿ ಶೇ. 25.81ರಷ್ಟು ಹೆಚ್ಚಳವಾಗಿದೆ. ಟಿಕೆಟ್‌ ರಹಿತ ಹಾಗೂ ಅಕ್ರಮ ಪ್ರಯಾಣದ ಕೇಸ್‌ಗಳ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಶೇ.21.08ರಷ್ಟು ಸಂಖ್ಯೆ ಕೇಸ್‌ಗಳು ದಾಖಲಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES  ಸೇತುವೆಯ ಕೆಳಗೆ ಉರುಳಿದ ಕಾರು : ಹೊನ್ನಾವರದ ಹಡಿನಬಾಳ ಸಮೀಪ ಓರ್ವನ ದುರ್ಮರಣ

ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಹಾಗೂ ಟಿಕೆಟ್‌ ರಹಿತ ಪ್ರಯಾಣವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇಲಾಖೆ ಈ ಕ್ರಮಕೈಗೊಂಡಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.