ಭಟ್ಕಳ; ಕಲಾವಿದನಿಗೆ ಎಂದಿಗೂ ಸಾವಿಲ್ಲ ಆತ ತನ್ನ ಕಲೆಯಿಂದ ಸದಾ ಜೀವಂತವಾಗಿರುತ್ತಾನೆ. ನಿಜವಾದ ಪ್ರತಿಭಾವಂತ ಯಾರ ಬೆಂಬಲ ಬಯಸದೇ ಸದಾ ಬೆಳಗುತ್ತಾನೆ ಎಂದು ಕಸಾಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಮತ್ತು ಶಿರಾಲಿ ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರತ್ ನುಡಿದರು. ಅವರು ಪ್ರತಿಭಾವಂತ ಹಿರಿಯ ಕಲಾಕಾರ ಶಿಕ್ಷಕ ಸಂಜಯ ಗುಡಿಗಾರ ಇವರ ಸಾರತ್ಯದಲ್ಲಿ ಶ್ರೀ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಡಶಾಲೆಯಲ್ಲಿ ನಿರ್ಮಾಣ ಗೊಂಡಿರುವ ಜಿಲ್ಲೆಯ ಪ್ರಥಮ ಆರ್ಟ ಗ್ಯಾಲರಿ ಕಲಾ ಕುಸುಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.
ಶಿಕ್ಷಣದ ಜೊತೆ ಜೊತೆಗೆನೆ ಮಕ್ಕಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುವುದಲ್ಲದೆ ವೃತ್ತಿಶಿಕ್ಷಣ ಮತ್ತು ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಇರುವ ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡುವ ಶ್ರೀಮಠದ ಕಾರ್ಯ ಸ್ಲಾಘನೀಯವಾದದ್ದು. ಶ್ರೀ ಮಠದ ಈ ಮಹತ್ವದ ಸೇವಾ ಭಾವನೆ ಬಡ ವಿದ್ಯಾರ್ಥಿಗಳ ಪಾಲಿಗೆ ಆಶಾದೀಪವಾಗಿದೆ. ಕಲಾವಿದನ ಸಾಮರ್ಥ ಗುರುತಿಸಿ ಮಕ್ಕಳಿಗೆ ಅನೂಕೂಲವಾಗುವ ದೃಷ್ಠಿಯಿಂದ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದಾದ ಕಲಾ ಗ್ಯಾಲರಿಯನ್ನು ನಿರ್ಮಾಣಮಾಡಿದ್ದು ಮಠದ ದೂರದೃಷ್ಠಿಗೆ ಹಿಡಿದ ಕೈಗನ್ನಡಿ ಎಂದು ಅವರು ನುಡಿದರು.
ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎನ್ನುವ ಭಾವನೆಯಿಂದ ಶ್ರೀಮಠ ಸಮಾಜದ ಎಲ್ಲ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಮುಂದೆ ತಮ್ಮ ಜೀವನ ನಿರ್ವಹಣೆಯಲ್ಲಿ ಬದುಕು ಕಟ್ಟಿಕೊಳ್ಳುವಲ್ಲಿ ಸೋಲಬಾರದು ಎನ್ನುವ ಕಾರಣದಿಂದ ವೃತ್ತಿಶಿಕ್ಷಣಕ್ಕೂ ಆಧ್ಯತೆ ನೀಡುತ್ತಿದೆ. ವಿದ್ಯಾರ್ಥಿಗಳು ಶೃದ್ಧೆಯಿಂದ ಅವುಗಳ ಪ್ರಯೋಜನ ಪಡೆಯಬೇಕು ಎಂದು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಮಾಜಿಕ ಕಳಕಳಿಯ ಸಹೋದರಿ ನಳಿನಿ ಮಂಜೇಶ್ವರ ನುಡಿದರು. ಗೌರೀಶ್ ಪಡುಕೋಣೆ ಮಾತನಾಡಿದರು.
ವೇದಿಕೆಯಲ್ಲಿ ಚಿತ್ರಾಪುರ ಮಠದ ವ್ಯವಸ್ಥಾಪಕ ನಾರಾಯಣ ಮಲ್ಲಾಪುರ, ಹರೀನ್ ಹಟ್ಟಿಯಂಗಡಿ, ಮಂಗೇಶ ಚಿಕ್ಕರಮನೆ, ಸುರಜ್ ಬಲವಳ್ಳಿ, ಪ್ರಭಾರ ಮುಖ್ಯೋಪದ್ಯಾಯ ವಾಸುದೇವ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ನಾಯ್ಕ ನಿರ್ವಹಿಸಿದರು.