ಭಟ್ಕಳ: ಪ್ರಸ್ತುತ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರನ್ನು ಆದ್ಯತೆ ನೀಡಿ ಸುತ್ತೋಲೆಯಲ್ಲಿ ತಿದ್ದುಪಡಿ ತಂದು ಸರ್ಕಾರ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ಪಂಚಾಯತ ರಾಜ್ ನೌಕರರ ಸಂಘ, ತಾಲೂಕು ಆಡಳಿತ ಹಾಗೂ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ನೌಕರರ ಸಂಘದ ನೇತೃತ್ವದಲ್ಲಿ ಹಲವಾರು ಗಣಕಯಂತ್ರ ನಿರ್ವಾಹಕರು ಆಗಮಿಸಿ. ವ್ಯವಸ್ಥಾಪಕ ಸುಧೀರ ಗಾಂವಕರರಿಗೆ ಮನವಿ ನೀಡಿದರು. ಇದೇ ರೀತಿ ಸಂಘದ ಸಹಕಾರ್ಯದರ್ಶಿ ಯೋಗೇಶ ನಾಯ್ಕರವರ ನೇತೃತ್ವದಲ್ಲಿ ಮುರ್ಡೇಶ್ವರ ಶಾಸಕ ಮಂಕಾಳು ವೈದ್ಯರವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕರು, ಗ್ರಾಮ ಪಂಚಾಯತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕ ಯಂತ್ರ ನಿರ್ವಾಹಕರ ಬೇಡಿಕೆ ನ್ಯಾಯಯುತವಾಗಿದ್ದು ಸರ್ಕಾರದ ಗಮನ ಸೆಳೆದು ನ್ಯಾಯದೊರಕಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.

RELATED ARTICLES  ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ ಸಿಬ್ಬಂದಿ

ಈ ಸಂದರ್ಭದಲ್ಲಿ ಮಹೇಶ ವಿ. ನಾಯ್ಕ, ಕಾರ್ಯದರ್ಶಿ ರಾಘವೇಂದ್ರ ಪೂಜಾರಿ, ಸದಸ್ಯರಾದ ನಾಗರಾಜ ಬಿ. ಜಿ, ರಾಮಚಂದ್ರ, ಶಾರದಾ, ಯೋಗೇಶ, ಚಂದ್ರಶೇಖರ ಗೊಂಡ, ಯೋಗೇಶ ನಾಯ್ಕ, ಮಮತಾ ನಾಯ್ಕ ಮತ್ತಿತರು ಉಪಸ್ಥಿತರಿದ್ದರು

RELATED ARTICLES  ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಎಗರಿಸಿದರು.