ಕುಮಟಾ: ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಮುಷ್ಖರದಿಂದಾಗಿ ಈಗಾಗಲೇ ಹಲವಾರು ಜೀವಗಳು ಬಲಿಯಾಗಿದ್ದು ಇದರಿಂದ ರಾಜ್ಯದ ಜನರಿಗೆ ಸಮಸ್ಯೆ ಉಂಟಾಗಿದೆ. ಆದ್ದರಿಂದ ಶೀಘ್ರದಲ್ಲಿ ಸರಕಾರ ಖಾಸಗಿ ವೈದ್ಯರ ಮುಷ್ಕರ ಅಂತ್ಯಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕುಮಟಾ ತಾಲೂಕಿನ ನಮಸ್ಕಾರ ಸಮಾಜ ಸೇವಾ ಸಂಘ ತಹಸಿಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕುಮಟಾ ಬಿ.ಜೆ.ಪಿ ಮುಖಂಡ ಸೂರಜ್ ನಾಯ್ಕ ಭಾಗಿಯಾಗಿದ್ರು ನಂತರ ಮಾತನಾಡಿದ ಅವರು ನಮ್ಮ ರಾಜ್ಯ ಸರಕಾರ ಖಾಸಗಿ ವೈದ್ಯರುಗಳ ವಿಶ್ವಾಸ ಗಳಿಸದೇ ಸಂಪೂರ್ಣ ತುಗಲಕ್ ದರ್ಬಾರಿನಂತೆ ಆದೇಶ ಹೊರಡಿಸಿ ಜನರ ಜೀವನದ ಜೋತೆ ಆಟವಾಡುತ್ತಿದೆ ತಕ್ಷಣದಲ್ಲಿ ವೈದ್ಯರ ಸಮಸ್ಯಗೆ ಕ್ರಮ ಕ್ಯೆಗೊಂಡು ಜನರ ಜೀವನವನ್ನು ಕಾಪಾಡಬೇಕು ಎಂದರು.

RELATED ARTICLES  ಬಡವರ ಪಾಲಿಗೆ ಸಿಗುತ್ತಿಲ್ಲ 'ಬಡವರ ಬಾದಾಮಿ' ಬೆಳೆ

ಇದೇ ಸಂದರ್ಭದಲ್ಲಿ ಗಣೇಶ ಭಟ್ ಮಾತನಾಡಿ ಸರಕಾರ ವೈದ್ಯರುಗಳಿಗೆ ಕಾನೂನು ಮಾಡುವ ಮೂಲಕ ಕಟ್ಟಿಹಾಕುವ ಕಾರ್ಯ ಮಾಡುತ್ತಿದೆ. ಒಂದು ವೇಳೆ ಮಣಿಪಾಲ,ಮಂಗಳೂರಿನಂತಹ ಖಾಸಗಿ ಆಸ್ಪತ್ರೆಗಳನ್ನು ಬಂದ ಮಾಡಿ ಮುಷ್ಕರ ಕೈಗೊಂಡರೆ ಏನಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಯೋಚನೆ ಮಾಡಬೇಕು ಎಂದರು.

RELATED ARTICLES  ಈಜಲು ತೆರಳಿದ ಇಬ್ಬರು ನೀರುಪಾಲು..!

ಒಟ್ಟಾರೆ ಖಾಸಗಿ ವೈದ್ಯರ ಸಮಸ್ಯೆಗೆ ಸಂಘ ಸಂಸ್ಥೆಗಳು ಬೆಂಬಲ ಸೂಚಿಸುತ್ತಿದೆ. ಸರಕಾರ ಸಾರ್ವಜನಿಕರಿಗೆ ಸರಿಯಾದ ಆರೋಗ್ಯ ನೀಡುವ ಆಸ್ಪತ್ರೆಗಳನ್ನು ನಿರ್ಮಿಸುವ ಬದಲು ಜೀವ ಉಳಿಸುವ ಖಾಸಗಿ ಆಸ್ಪತ್ರೆಗಳ ಮೇಲೆ ಗಧಾ ಪ್ರಹಾರ ಮಾಡುತ್ತಿರುವುದು ಜನರಲ್ಲಿಯು ಬೇಸರ ಮೂಡಿಸಿದೆ