ಕುಮಟಾ : ತಾಲೂಕಿನ ನಾದಶ್ರೀ ಕಲಾ ಕೇಂದ್ರದಲ್ಲಿ ಕುಮಟಾ ಪ್ರೋ ಕಬ್ಬಡಿ ಅಸೋಸಿಯೆಷನ್ ವತಿಯಿಂದ, ನಮ್ಮ ಜಿಲ್ಲೆಯ ಪ್ರೋ ಕಬ್ಬಡಿ ಆಟಗಾರರಾದ ಬೆಂಗಳೂರು ಬುಲ್ಸ ತಂಡದಲ್ಲಿ ಆಟವಾಡಿದ ಭಟ್ಕಳದ ಹರೀಶ ನಾಯ್ಕ ಮತ್ತು ಬೆಂಗಾಲ ವಾರಿಯರ್ಸ ಕೋಚ್‍ಗಿ ಕಾರ್ಯನಿರ್ವಾಹಿಸಿದ ಕನ್ನಡಿಗ ಜಗದೀಶ ಕುಂಬ್ಳೆ ಇವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಕುಮಟಾದ ಪ್ರೋ ಕಬ್ಬಡಿ ಅಸೋಸಿಯೆಷನ್ ವತಿಯಿಂದ ಕ್ರೀಡಾಪಟುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

RELATED ARTICLES  ಡಿಪೋದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ ಗೆ ಆಕಸ್ಮಿಕ ಬೆಂಕಿ

ಈ ಸಂದರ್ಭದಲ್ಲಿ ಮಾತನಾಡಿದ ಪ್ರೋ ಕಬ್ಬಡಿ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಪ್ರೋ ಕಬ್ಬಡಿ ಅಸೋಸಿಯೆಷನ್ ನಿರ್ಮಾಣ ಮಾಡಲು ಮೊದಲು ಸೂಚನೆ ನೀಡಿದವರು ಜಗದೀಶ ಕುಂಬ್ಳೆ ಎಂದರು.

RELATED ARTICLES  ಬೈಕ್ ಸವಾರನ ಮೇಲೆ ಹರಿದ ಬಸ್ : ನವ ವಿವಾಹಿತ ಸಾವು.

ಈ ಕಾರ್ಯಕ್ರಮದಲ್ಲಿ ಪ್ರೋ ಕಬ್ಬಡಿ ಅಸೋಸಿಯೆಷನ್ ತಾಲೂಕಾಧ್ಯಕ್ಷ ಮನೀಷ ನಾಯ್ಕ, ಅನೀಲ ನಾಯ್ಕ,ದಿವಾಕರ ನಾಯ್ಕ,ಮುಂತಾದವರು ಉಪಸ್ಥಿತರಿದ್ದರು..