ಕುಮಟಾ: ದಿವಗಿ ಅತಿಕ್ರಮಣದಾರರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಇಂದು ಮಾಜಿ ಶಾಸಕರು ಹಾಲಿ ಬಿಜೆಪಿ ಪಕ್ಷದ ನಾಯಕರಾದ ಶ್ರೀ ದಿನಕರ್ ಕೆ ಶೆಟ್ಟಿ ನೇತೃತ್ವದಲ್ಲಿ ಅತಿಕ್ರಮಣ ಅರ್ಜಿ ಸಲ್ಲಿಸಿದವರ ಜೊತೆ ಸಮಾಜ ಕಲ್ಯಾಣ ಇಲಾಖೆಗೆ ಹೋಗಿ ವಿಚಾರಿಸಲಾಯಿತು.ಸರ್ಕಾರದ ಅಧಿಕಾರಿಗಳು 1 ಗುಂಟೆ, 2 ಗುಂಟೆ ಹಿಡುವಳಿ ಹೊಂದಿದ್ದರೂ ಅರ್ಜಿ ತಿರಸ್ಕರಿಸುತ್ತಿದ್ದಾರೆ. 75 ವರ್ಷದ ದಾಖಲೆ ಇಲ್ಲ ಎಂದು ಅರ್ಜಿ ತಿರಸ್ಕರಿಸಿ, ಹಿರಿಯ ನಾಗರಿಕರ ಹೇಳಿಕೆ ಮತ್ತು ಅರಣ್ಯ ಹಕ್ಕು ಸಮಿತಿ ಅಭಿಪ್ರಾಯಗಳಿಗೆ ಮಾನ್ಯ ಮಾಡುತ್ತಿಲ್ಲ. ಗ್ರಾಮ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಲೆಕ್ಕಿಸದೆ ಅತಿಕ್ರಮಣ ಅರ್ಜಿಗಳನ್ನು ಸಾವಿರ ಸಾವಿರ ಸಂಖ್ಯೆಯಲ್ಲಿ ತಿರಸ್ಕರಿಸುತ್ತಿದ್ದು, ಹಲವಾರು ದಶಕಗಳಿಂದ ಭೂಮಿ ಸಾಗುವಳಿ ಮಾಡಿ, ಮನೆ ಕಟ್ಟಿಕೊಂಡು ಜೀವಿಸುತ್ತಿರುವ ರೈತಾಪಿ ಜನತೆ ತೀವೃ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಭಟ್ಕಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇಲಾಖೆ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ

ಅರಣ್ಯ ಹಕ್ಕು ಅನುಷ್ಠಾನಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳು ಕಾನೂನನ್ನು ವ್ಯತಿರಿಕ್ತವಾಗಿ ಜಾರಿಗೆ ತರುವ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾನೂನು ಅರಿವು ಹಾಗೂ ಇಚ್ಚಾಶಕ್ತಿಯ ಕೊರತೆಯಿಂದ ಕಾಯಿದೆ ಅನುಷ್ಠಾನ ನಿಂತ ನೀರಾಗಿದ್ದು ತಕ್ಷಣ ಸಂಬಂಧಪಟ್ಟವರು ಪ್ರಕ್ರಿಯೆಗೆ ವೇಗ ನೀಡುವಂತೆ ಅವರು ಒತ್ತಾಯಿಸಿದರು.

RELATED ARTICLES  ಅಪವಿತ್ರ ಮೈತ್ರಿಯ ಆಕಸ್ಮಿಕ ಸಾಂದರ್ಭಿಕ ಶಿಶುವಿನಿಂದ ಜಿಲ್ಲೆಗೆ ಸತತವಾಗಿ ಅನ್ಯಾಯವಾಗುತ್ತಿದೆ : ಪ್ರಮೋದ ಹೆಗಡೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದ್ಯಸರಾದ ಗಜು ಪೈ,ಗ್ರಾಮ ಪಂಚಾಯತ್ ಸದ್ಯಸರಾದ ಹೇಮಂತ್ ಗಾವ್ಕರ್ ಇದ್ದರು.