ಕಾರವಾರ: ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.

ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂರ್ಯನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ ತೇರಗಾಂವ-ಹುಣಸವಾಡ ಸಂಪರ್ಕ ಸೇತುವೆಗೆ ತಡೆಗೋಡೆ ಮತ್ತು ತಳಪಾಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡುವರು, ಬಳಿಕ ನೂತನವಾಗಿ ನಿರ್ಮಾಣವಾದ ಸಮುದಾಯ ಭವನ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು..ಸಂಜೆ 6 ಗಂಟೆಗೆ ಹಳಿಯಾಳ ದೇಶಪಾಂಡೆ ನಗರದಲ್ಲಿ ಬುಧ್ಧ ಅಂಬೇಡ್ಕರ್ ಸೋಶಿಯಲ್ ವೆಲ್ಪೆರ್ ಮತ್ತು ಚಾರಿಟೇಬಲ್,ಎಜ್ಯುಕೇಶನ ಟ್ರಸ್ಟನ ಉದ್ಛಾಟನ ಸಮಾರಂಭದಲ್ಲಿ ಭಾಗವಹಿಸುವರು.
ನವೆಂಬರ 18 ರಂದು ಬೆಳಗ್ಗೆ 9 ಗಂಟೆಗೆ ಹಳಿಯಾಳದಲ್ಲಿ ಕರಾವಳಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸುವರು. ಬೆಳಗ್ಗೆ 10 ಕ್ಕೆ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. 11 ಗಂಟೆಗೆ ಚಾಪೋಳಿಯ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಮಧ್ಯಾನ್ಹ 12 ಗಂಟೆಗೆ ಕಾರ್ಟೋಳಿ ನಾಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೇತುವೆ ಮತ್ತು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡುವರು. ಮಧ್ಯಾನ್ನ 1ಕ್ಕೆ ಡಿಗ್ಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಹಾಗೂ ನೂತನವಾಗಿ ನಿರ್ಮಿಸಿದ ಶಾಲಾ ಕೊಠಡಿಗಳ ಉದ್ಛಾಟನಾ ಸಮರಂಭದಲ್ಲಿ ಭಾಗವಹಿಸುವರು, ನಂತರ ಕರಂಜೆಯಲ್ಲಿ ನೂತನವಗಿ ಮಂಜೂರಾದ ಬಾಂದಾರ ಕಾಮಗಾರಿಯ ಅಡಿಗಲ್ಲು ಸಮರಂಭದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಕುಂಬರವಾಡಾದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಗ್ರಾಮ ವಿಕಾÀಸ ಯೋಜನೆಯಡಿಯಲ್ಲಿ ಮಂಜೂರಾದ ಅಭಿವೃದ್ದಿ ಕಮಗಾರಿಗಳಿಗೆ ಚಾಲನೆ ನೀಡುವರು. ಸಂಜೆ 5 ಕ್ಕೆ ನುಜ್ಜಿ ರಾಮಲಿಂಗ ದೇವಸ್ಥಾನಕ್ಕೆ ಜೋಯಿಡಾ-ಕಾರವಾರ ಮುಖ್ಯರಸ್ತೆಯಿಂದ ದೇವಸ್ಥಾನದವರೆಗೆ ಇಂಟರ್ಲಕ್ ಪೇವರ್ಸ್ ವiತ್ತು ದೇವಸ್ಥಾನದ ಸುತ್ತಲೂ ಪೇವರ್ಸ್ ಅಳವಡಿಸುವ ಕಮಗಾಗಳಿಗೆ ಚಾಲನೆ ನೀಡುವರು. ಸಂಜೆ 6 ಕ್ಕೆ ಅಣಶಿಯಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು.

RELATED ARTICLES  ಬಾಲಕಿ ಅಪಹರಣ : ಆರೋಪಿಗಳು ಪೊಲೀಸ್ ಬಲೆಗೆ

ನವೆಂಬರ 19 ರಂದು ಬೆಳಗ್ಗೆ 10.30 ಕ್ಕೆ ಅವೇಡಾ ಗ್ರಾಮದ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಮಗಾರಿಗಳಿಗೆ ಚಾಲನೆ ನೀಡುವರು. ಬೆಳಗ್ಗೆ 11 ಗಂಟೆಗೆ ಸಿಂಗರಗಾಂವದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಳಿಗೆ ಚಾಲನೆ ಹಾಗೂ ನಮ್ಮ ಗ್ರಾಮ ಮತ್ತು ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮಂಜೂರಾದ ಉಸೋಡಾ-ಜಗಲಬೇಟ್ ರಸ್ತೆಯಿಂದ ಕೂಡಲಗಾಂವ ವಾಯಾ ಸಿಂಗರಗಾಂವ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 12ಕ್ಕೆ ಅಸು ಗ್ರಾಮದ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು, ನಂತರ ನೂತನವಾಗಿ ಮಂಜೂರಾದ ಸಮುದಾಯ ಭವನ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಕ್ಕೆ ರಾಮನಗರದ ರಾಣಿ ಚನ್ನೆಮ್ಮ ಶಾಲೆಯ ನೂತನ ಕಟ್ಟಡ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು ಬಳಿಕ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಹಾಗೂ ಡಿಸ್ಟ್ರಿಕ್ಟ್ ಮಿನರಲ್ ಫಂಡ ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಚಾಲನೆ ನೀಡುವರು.

RELATED ARTICLES  ಹೊನ್ನಾವರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕೋಣಗಳ ಲಾರಿ ಪೋಲೀಸ್ ಬಲೆಗೆ