ಕರಾವಳಿ ಉತ್ಸವ 2017ರ ಅಂಗವಾಗಿ ಕಲ್ಲಿನ ಶಿಲ್ಪಕಲಾ ಕೃತಿ ರಚನಾ ಶಿಬಿರ ನಡೆಸಲಾಗುತ್ತಿದ್ದು, ಆಸಕ್ತ ಕಲಾವಿದರು ನ.18 ರೊಳಗೆ ತಮ್ಮ ಹೆಸರುಗಳನ್ನು ಶಿಲ್ಪ ಕಲಾ ನಿರ್ಮಾಣ ಸಮಿತಿ ಬಳಿ ಹೆಸರು ನೊಂದಾಯಿಸಿಕೊಳ್ಳಲು ಶಿಲ್ಪ ಕಲಾ ನಿರ್ಮಾಣ ಸಮಿತಿ ಅಧ್ಯಕ್ಷರು ವಿನಂತಿಸಿದ್ದಾರೆ.

ಉತ್ಸವದ ಅಂಗವಾಗಿ ನಡೆಯುವ ಶಿಲ್ಪಕಲಾ ರಚನಾ ಶಿಬಿರದಲ್ಲಿ ರೂಪಗೊಂಡ ಕಲಾ ಕೃತಿಗಳನ್ನು ರಾಕ್ ಗಾರ್ಡನ್ನಲ್ಲಿ ಪ್ರತಿಷ್ಠಾಪಿಸಲು ಯೋಜಿಸಲಾಗಿದೆ. ಜಿಲ್ಲೆಯ ಮತ್ತು ಹೊರ ಜಿಲ್ಲೆಗಳ ಶಿಲ್ಪಕಲಾ ಕಲಾವಿದರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಲ್ಪಕಲಾ ಕಲಾವಿದರಿಗೆ ಊಟ, ವಸತಿ ಸೌಲಭ್ಯವನ್ನು ಉತ್ಸವ ಸಮಿತಿ ಮಾಡುತ್ತದೆ. ಶಿಲ್ಪದಲ್ಲಿ ರೂಪಿಸಿದ ಕಲಾಕೃತಿಗಳಿಗೆ ಸೂಕ್ತ ಗೌರವಧನವನ್ನು ಸಹ ನೀಡಲಾಗುವುದು. ಉತ್ತರ ಕನ್ನಡ ಪ್ರಕೃತಿ, ಸಾಹಿತ್ಯ,ಸಂಸ್ಕøತಿ ಮತ್ತು ಆಧುನಿಕ ಶೈಲಿಯ ಭಾರತೀಯ ಸಂಸ್ಕøತಿಯ ಶಿಲ್ಪಗಳನ್ನು, ಕಲಾತ್ಮಕ ಶಿಲ್ಪಕಲಾ ಕೃತಿಗಳನ್ನು ಶಿಬಿರದಲ್ಲಿ ರೂಪಿಸಲು ಕಲಾವಿದರನ್ನು ಆಹ್ವಾನಿಸಲಾಗುತ್ತಿದ್ದು, 40 ಜನ ಶಿಲ್ಪಕಲಾವಿದರು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ.

RELATED ARTICLES  ದ್ವಿತೀಯ ಪಿ.ಯು ಪರೀಕ್ಷೆ ಬರೆಯುವವರಿಗೆ ಗುಡ್ ನ್ಯೂಸ್

ಆಸಕ್ತ ಕಲಾವಿದರು ತಮ್ಮ ಹೆಸರು ಮತ್ತು ವಿವರಗಳನ್ನು ಶಿಲ್ಪಕಲಾ ನಿರ್ಮಾಣ ಸಮಿತಿ, ಕರಾವಳಿ ಉತ್ಸವ-2017, ಕಾರವಾರ ಅಥವಾ ಶಿಲ್ಪಕಲಾ ನಿರ್ಮಾಣ ಸಮಿತಿಯ ಸದಸ್ಯರಾದ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಮೊಬೈಲ್ ಸಂಖ್ಯೆ 94482 21338, ಅಥವಾ 94806 95887 ಅಥವಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಮೊಬೈಲ್ ಸಂಖ್ಯೆ 94484 08633 ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ನ.18 ಹೆಸರು ನೊಂದಾಯಿಸಲು ಕೊನೆಯ ದಿನ. ಶಿಬಿರ 15 ರಿಂದ 20 ದಿನಗಳ ಕಾಲ ನಡೆಯಲಿದ್ದು, ಶಿಲ್ಪಕಲಾ ಶಿಬಿರ ಪ್ರಾರಂಭವಾಗುವ ದಿನಾಂಕವನ್ನು ಕಲಾವಿದರಿಗೆ ತಿಳಿಸಲಾಗುವುದು ಎಂದು ಶಿಲ್ಪಕಲಾ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪೌರಾಯುಕ್ತ ಎಸ್.ಯೋಗಿಶ್ವರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಪೌರಾಣಿಕ ಯಕ್ಷಗಾನ “ಸುಧನ್ವಾರ್ಜುನ”