ಟೋಕಿಯೋ: ಅಪಾಯಕಾರಿ ಬ್ಲೂವೇಲ್ ಗೇಮ್ ಚಾಲೆಂಜ್ ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು, ಸೆಲ್ಫಿಯಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆಯೂ ಓದಿದ್ದೀರಿ..ಆದರೆ ಸಾಮಾಜಿಕ ಜಾಲತಾಣ ಟ್ವೀಟರ್ ಅನ್ನು ಬಳಸಿಕೊಂಡು 9 ಮಂದಿಯನ್ನು ಹತ್ಯೆಗೈದಿರುವ ಸೀರಿಯಲ್ ಕಿಲ್ಲರ್ ನನ್ನು ಜಪಾನ್ ಪೊಲೀಸರು ಬಂಧಿಸಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

ಏನಿದು ಟ್ವೀಟರ್ ಕಿಲ್ಲರ್?

ಟ್ವೀಟರ್ ಕಿಲ್ಲರ್ ಕುಖ್ಯಾತಿಯ ಜಪಾನ್ ನ ಟಕಹಿರೋ ಶಿರೈಷಿ (27) ಎಂಬಾತನನ್ನು ಬಂಧಿಸಿದ್ದ ಪೊಲೀಸರ ಬಳಿ ತನ್ನ ಸೀರಿಯಲ್ ಹತ್ಯೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರಲ್ಲಿ 8 ಮಂದಿ ಯುವತಿಯರು, ಒಬ್ಬ ಯುವಕ ಸೇರಿದ್ದಾನೆ.

ಟ್ವೀಟರ್ ಅನ್ನು ಬಳಸಿಕೊಂಡು ಟಕಹಿರೋ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ನೆರವು ನೀಡುತ್ತೇನೆ ಎಂದು ಹೇಳಿ ಆಕರ್ಷಿಸುತ್ತಿದ್ದನಂತೆ. ಅದರಂತೆ ಈತನ ಮಾತನ್ನು ನಂಬಿ ಬಂದವರನ್ನು ಕೊಲೆಗೈಯುತ್ತಿದ್ದ!

RELATED ARTICLES  ಇಂದು ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ವಿಜಯೋತ್ಸವಕ್ಕೆ ಬಿತ್ತು ಬ್ರೇಕ್!

ಟ್ವೀಟರ್ ಮಾಧ್ಯಮವನ್ನೇ ಬಳಸಿಕೊಂಡು ಶಂಕಿತ ಹಂತಕನನ್ನು ಪೊಲೀಸರು ಬಂಧಿಸಿದ್ದರು. ಫೆಬ್ರುವರಿಯಲ್ಲಿ ಶಂಕಿತ ಹಂತಕನನ್ನು ಸಂಘಟಿತ ಅಪರಾಧದ ಆರೋಪದಡಿ ಬಂಧಿಸಿದ್ದರು, ಆದರೆ ಜೈಲುವಾಸವನ್ನು ಅಮಾನತ್ತಿನಲ್ಲಿಟ್ಟಿರುವುದಾಗಿ ವರದಿ ತಿಳಿಸಿದೆ.

2009 ರಿಂದ 2011ರ ಜುಲೈವರೆಗೆ ಈತ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಬಳಿಕ ಕೆಲವನ್ನು ಬಿಟ್ಟಿದ್ದ. ತದನಂತರ ಕೆಲಸಕ್ಕಾಗಿ ತುಂಬಾ ಪ್ರಯತ್ನಪಟ್ಟಿದ್ದರೂ ಯಾವ ಕೆಲಸವೂ ಸಿಕ್ಕಿರಲಿಲ್ಲವಾಗಿತ್ತು.

ಮಾನಸಿಕವಾಗಿ ಕುಗ್ಗಿಹೋಗಿದ್ದ ಶಿರೈಷಿ ಆಯ್ದುಕೊಂಡಿದ್ದು ಟ್ವೀಟರ್ ಅನ್ನು, ಈ ಸೀರಿಯಲ್ ಹತ್ಯೆಯ ಘಟನೆಗೆ ಜಪಾನಿಗರು ಬೆಚ್ಚಿಬಿದ್ದಿದ್ದರು. ಯಾಕೆಂದರೆ ಜಪಾನ್ ನಲ್ಲಿ ಅಪರಾಧಗಳ ಸಂಖ್ಯೆ ತುಂಬಾ ಕಡಿಮೆ.

RELATED ARTICLES  ಭಟ್ಕಳದಲ್ಲಿ ಪಾಕ್ ಮಹಿಳೆ : ಸಮಗ್ರ ತನಿಖೆಗೆ ಆಗ್ರಹ

ನಾನು ಟ್ಟೀಟರ್ ಮೂಲಕ ಸಂತ್ರಸ್ತೆರನ್ನು ಸಂಪರ್ಕಿಸಿ ನಂತರ ಅವರನ್ನು ನನ್ನ ಸಂಪರ್ಕಿಸಲು ಬಂದಾಗ ಕೊಲೆಗೈಯುತ್ತಿದ್ದೆ ಎಂದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಟೋಕಿಯೋದ ನೈಋತ್ಯ ಪ್ರದೇಶದ ಝಾಮಾ ಎಂಬಲ್ಲಿ ಫ್ಲ್ಯಾಟ್ ಹೊಂದಿದ್ದ, ಆಗಸ್ಟ್ 22ರಂದು ಟ್ವೀಟ್ ಮೂಲಕ ಸಂತ್ರಸ್ತೆಯೊಬ್ಬಳನ್ನು ಸಂಪರ್ಕಿಸಿ ಆತ್ಮಹತ್ಯೆ ಯೋಚನೆಗೆ ನೆರವು ನೀಡುವುದಾಗಿ ಹೇಳಿದ್ದ ಎಂದು ಶಿಂಬನ್ ಡೈಲಿ ವರದಿ ಮಾಡಿದೆ. ಇದರ ಜಾಡನ್ನು ಹಿಡಿದು ಹೊರಟ ಪೊಲೀಸರಿಗೆ ಹಂತಕ ಸಿಕ್ಕಿಬಿದ್ದಿದ್ದ! ಫ್ಲ್ಯಾಟ್ ನೊಳಗೆ ಮೃತದೇಹಗಳು ಸಿಕ್ಕಿವೆ, ಈತ ಒಂಬತ್ತು ಮಂದಿಯನ್ನು ಹೇಗೆ ಕೊಂದ ಎಂಬ ಬಗ್ಗೆ ಸಾಕ್ಷ್ಯವನ್ನು ಕಲೆಹಾಕುತ್ತಿದ್ದೇವೆ ಎಂದು ಜಪಾನ್ ಪೊಲೀಸರು ತಿಳಿಸಿದ್ದಾರೆ.