ನೌಕರರ ಭವಿಷ್ಯ ನಿಧಿ ಅತ್ಯಂತ ಪ್ರಮುಖವಾದ ನಿವೃತ್ತಿ ಉಳಿತಾಯ ಯೋಜನೆಗಳಲ್ಲೊಂದು. ಇಪಿಎಫ್ ನಲ್ಲಿ ನೌಕರರಿಗೆ ಸ್ಥಿರ ಆದಾಯವಿರುತ್ತದೆ. ಹಾಗಾಗಿ ಉದ್ಯೋಗ ಬದಲಾಯಿಸಿದಾಗ ಇಪಿಎಫ್ ಬ್ಯಾಲೆನ್ಸ್ ಅನ್ನು ಕೂಡ ಟ್ರಾನ್ಸ್ ಫರ್ ಮಾಡಿಕೊಳ್ಳಬೇಕು.

ಮೆಚ್ಯೂರ್ ಆಗುವ ಮುನ್ನವೇ ಹಣ ವಿತ್ ಡ್ರಾ ಮಾಡುವ ಬದಲು ಅದನ್ನು ಟ್ರಾನ್ಸ್ ಫರ್ ಮಾಡಿಸಿಕೊಳ್ಳಿ. ಆನ್ ಲೈನ್ ನಲ್ಲೂ ನೀವಿದನ್ನು ಮಾಡಬಹುದು. ಇದಕ್ಕಾಗಿ EPFO ಮೆಂಬರ್ಸ್ ಪೋರ್ಟಲ್ ಓಪನ್ ಮಾಡಿ. ನಿಮ್ಮ UAN ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.

RELATED ARTICLES  ಬದಲಾಗುತ್ತಿವೆ ಚಿತ್ರಮಂದಿರಗಳು: ಸಿನಿಪ್ರಿಯರಿಗೆ ಎಕ್ಸೈಟಿಂಗ್ ಸುದ್ದಿ!

ಆನ್ ಲೈನ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಿ. ಮೆನುವಿನಲ್ಲಿರೋ ಟ್ರಾನ್ಸ್ ಫರ್ ರಿಕ್ವೆಸ್ಟ್ ಸೆಲೆಕ್ಟ್ ಮಾಡಿ. ನಿಮ್ಮ ಇಪಿಎಫ್ ನಂಬರ್, ಜನ್ಮದಿನಾಂಕ ಸೇರಿದಂತೆ ಎಲ್ಲ ವಿವರಗಳೂ ಅಲ್ಲಿ ಲಭ್ಯವಾಗುತ್ತವೆ. ಆ ವಿವರ ಸರಿಯಾಗಿದೆಯೋ ಇಲ್ಲವೋ ಎಂದು ಮರೆಯದೇ ಪರಿಶೀಲಿಸಿ.

RELATED ARTICLES  ಕೈಕೊಟ್ಟ ಇವಿಎಂ ಮಷಿನ್ : ಒಂದು ಗಂಟೆಗಳ ಕಾಲ ಮತದಾನ ಸ್ಥಗಿತ

ಅಟೆಸ್ಟೇಶನ್ ಕ್ಲೇಮ್ ಫಾರ್ಮ್ ಅನ್ನು ಸೆಲೆಕ್ಟ್ ಮಾಡಿ. ಅದರಲ್ಲಿ ಕೇಳಿರುವ ವಿವರಗಳನ್ನೆಲ್ಲ ಭರ್ತಿ ಮಾಡಿ. ನಿಮ್ಮ ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಬ್ ಮಿಟ್ ಆಪ್ಷನ್ ಕ್ಲಿಕ್ ಮಾಡಿದ್ರೆ ನಿಮ್ಮ ಪಿಎಫ್ ಬ್ಯಾಲೆನ್ಸ್ ಆನ್ ಲೈನ್ ನಲ್ಲೇ ಟ್ರಾನ್ಸ್ ಫರ್ ಆಗುತ್ತದೆ.