ಕಾರವಾರ: ಡಿಸೆಂಬರ್‌ ತಿಂಗಳಲ್ಲಿ ಜರುಗಲಿರುವ ಮೂರು ದಿನಗಳ ಕರಾವಳಿ ಉತ್ಸವದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಇಲ್ಲಿನ ಕಡಲತೀರದಲ್ಲಿ ಹೊಸ ವೇದಿಕೆ ಸಜ್ಜುಗೊಳ್ಳುತ್ತಿದೆ.

ರಸಸಂಜೆ ಕಾರ್ಯಕ್ರಮಗಳಿಗೆ ಮುಖ್ಯಭೂಮಿಕೆಯಾಗಿದ್ದ ಕಡಲತೀರದ ಮಯೂರವರ್ಮ ವೇದಿಕೆಯು ಚತುಷ್ಪಥಕ್ಕೆ ಭಾಗಶಃ ತೆರವುಗೊಳ್ಳಲಿದೆ. ಹೀಗಾಗಿ ಅದರ ಪಕ್ಕದಲ್ಲಿಯೇ 70 ಅಡಿ ಉದ್ದ, 40 ಅಡಿ ಅಗಲದ ಹೊಸ ವೇದಿಕೆಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಅಡಿಪಾಯ ತೆಗೆದು ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದೆ.

25 ವರ್ಷಗಳ ನಂತರ ಹೊಸ ವೇದಿಕೆ: ಸುಮಾರು 25 ವರ್ಷಗಳ ಹಿಂದೆ ಕಾರವಾರ ನಗರಸಭೆಯು ಮಯೂರ ವರ್ಮ ವೇದಿಕೆಯನ್ನು ನಿರ್ಮಿಸಿತ್ತು. 1992ರಲ್ಲಿ ಸಣ್ಣ ಪ್ರಮಾಣದಲ್ಲಿ ರೂಪು ಗೊಂಡಿದ್ದ ವೇದಿಕೆಯನ್ನು 2008ರಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಜಿಲ್ಲಾಡಳಿತ ವತಿಯಿಂದ ನವೀಕರಣ ಮಾಡಲಾಗಿತ್ತು. ಗಾಳಿ, ಮಳೆಗೆ ಹಾನಿಯಾಗದಂತೆ ಸುಸಜ್ಜಿತವಾದ ಚಾವಣಿಯನ್ನೂ ಅಳವಡಿಸಲಾಗಿತ್ತು. ವೇದಿಕೆಯ ಹಿಂಭಾಗದಲ್ಲಿ ಕಲಾವಿದರಿಗಾಗಿ ಮೀಸ ಲಾಗಿದ್ದ ಕೊಠಡಿಯು ಹಾನಿಗೊಂಡಾಗ ನಗರಸಭೆಯು ₹ 10 ಲಕ್ಷದ ವೆಚ್ಚದಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ಮಾಡಿಸಿತ್ತು. ಇದೀಗ ವೇದಿಕೆಯು ಇನ್ನಷ್ಟು ಹೊಸ ರೂಪ ಪಡೆಯುತ್ತಿದೆ.

RELATED ARTICLES  ದೇಶಪಾಂಡೆ ನಾಡು ಕಂಡ ಸರ್ವಶ್ರೇಷ್ಠ ನಾಯಕ -ಮಾಜಿ ಶಾಸಕಿ ಶಾರದಾ ಶೆಟ್ಟಿ

ಮಯೂರವರ್ಮ ವೇದಿಕೆ ನಿರ್ಮಿಸುವ ಪೂರ್ವದಲ್ಲಿ ಸಣ್ಣ ಪ್ರಮಾಣದ ವೇದಿಕೆ ಬಳಕೆಯಲ್ಲಿತ್ತು. ಅದು ಹೆಚ್ಚಾಗಿ ರಾಜಕೀಯ ಬಹಿ ರಂಗ ಸಭೆ, ಸಮಾರಂಭಗಳಿಗೆ ಉಪಯೋಗಿಸಲಾಗುತ್ತಿತ್ತು. ಅಟಲ್‌ ಬಿಹಾರಿ ವಾಜಪೇಯಿಯವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಇದೇ ವೇದಿಕೆ ಮೇಲೆ ಭಾಷಣ ಮಾಡಿದ್ದರು ಎಂದು ಇಲ್ಲಿನ ಹಿರಿಯರು ಈಗಲೂ ನೆನೆಯುತ್ತಾರೆ.

RELATED ARTICLES  ಖ್ಯಾತ ಸಾಹಿತಿ ಜಿ.ಹೆಚ್​.ನಾಯಕ್​ ಇನ್ನಿಲ್ಲ

ಕಾಮಗಾರಿ ಆರಂಭ: ‌‘ಚತುಷ್ಪಥ ಕಾಮಗಾರಿಯನ್ನು ಮುಂಬೈನ ಐಆರ್‌ಬಿ ಕಂಪೆನಿಯು ನಿರ್ವಹಿಸುತ್ತಿದ್ದು, ಕಾ ಮಗಾರಿಗೆ ತೆರವುಗೊಳ್ಳಲಿರುವ ಮಯೂರವರ್ಮ ವೇದಿಕೆ ಪಕ್ಕದಲ್ಲಿಯೇ ಮರು ನಿರ್ಮಾಣ ಮಾಡುವಂತೆ ಕಂಪೆನಿಗೆ ಪತ್ರ ಬರೆದಿದ್ದೆವು. ಅದಕ್ಕೆ ಅವರು ಹೊಸ ವೇದಿಕೆ ನಿರ್ಮಾಣಕ್ಕಾಗಿ ₹ 25 ಲಕ್ಷ ನೀಡಿದ್ದು, ಒಂದು ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದೆ.