ಅಂಕೋಲಾ: ‘ಬಡವರ ಬಾದಾಮಿ’ ಎಂದೇ ಖ್ಯಾತಿಯಾದ ಶೇಂಗಾವನ್ನು ಬೆಳೆದ ತಾಲ್ಲೂಕಿನ ರೈತರು ಇದೀಗ ನಷ್ಟ ಅನುಭವಿಸುವಂತಾಗಿದೆ. ಈ ಬಾರಿ ಇಳುವರಿ ತುಂಬಾ ಕಡಿಮೆಯಾಗಿರುವುದರಿಂದ ರೈತರ ಮುಖದಲ್ಲಿ ಬೇಸರದ ಛಾಯೆ ಮೂಡಿದೆ.

ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಎತ್ತರ ಪ್ರದೇಶದ ಗದ್ದೆಗಳಲ್ಲಿ ಭತ್ತದ ಬದಲಾಗಿ ಶೇಂಗಾವನ್ನು ಕೆಲವು ರೈತರು ಬೆಳೆಯುತ್ತಿದ್ದಾರೆ. ತಾಲ್ಲೂಕಿನ ಬೆಳಂಬಾರ, ಹೊಸಗದ್ದೆ ಸೇರಿದಂತೆ ಎತ್ತರ ಇರುವ ಗದ್ದೆಗಳಲ್ಲಿ, ಬೇಣದಲ್ಲಿ ನೀರಿನ ಕೊರತೆಯಿಂದ ಭತ್ತದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದ್ದವು. ಹೀಗಾಗಿ ಇಂಥ ಜಾಗದಲ್ಲಿ ಭತ್ತದ ಬದಲಾಗಿ ಶೇಂಗಾ ಬೆಳೆದಿದ್ದರು. ಬೆಳಂಬಾರ ಗ್ರಾಮದ ಗದ್ದೆಯಿಂದ ಇದೀಗ ಶೇಂಗಾವನ್ನು ಕೀಳುತ್ತಿದ್ದು, ಇಳುವರಿ ತೀವ್ರವಾಗಿ ಕುಸಿದಿದೆ.

RELATED ARTICLES  ದೇಶೋನ್ನತಿಯ ಕನಸು ಕಟ್ಟಲು ಬನ್ನಿ:ಎನ್.ಆರ್.ಗಜು

ಪರಿಹಾರ ನೀಡಲು ಆಗ್ರಹ: ‘ಮಳೆ ಅಭಾವದಿಂದಾಗಿ ಈ ಹಿಂದೆ ಭತ್ತ ಬೆಳೆಯುತ್ತಿದ್ದ ಜಾಗದಲ್ಲಿ ಅನಿವಾ ರ್ಯವಾಗಿ ಶೇಂಗಾ ಬೆಳೆಯಬೇಕಾ ಗಿದೆ. ಇಲ್ಲದಿದ್ದರೆ ಆ ಭೂಮಿ ಬಂಜರು ಬಿಡಬೇಕಾಗುತ್ತದೆ. ನಷ್ಟವಾದರೂ ನಮ್ಮ ಹಿರಿಯರು ಮಾಡಿಕೊಂಡು ಬಂದ ಕೃಷಿ ಕಾರ್ಯ ಮುಂದುವರಿಸಿಕೊಂಡು ಹೋಗು ತ್ತಿದ್ದೇವೆ. ಹಾನಿಗೊಳಗಾದ ಶೇಂಗಾ ಬೆಳೆಯಿಂದ ನಷ್ಟಕ್ಕೊಳಗಾದವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಸೋಮು ಗೌಡ ಆಗ್ರಹಿಸಿದರು.

RELATED ARTICLES  ಮಹಾಬಲೇಶ್ವರ ದೇವಾಲಯವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ತಕ್ಷಣ ಹಸ್ತಾಂತರಿಸಲು ಸರ್ವೋಚ್ಛ ನ್ಯಾಯಾಲಯ ಸೂಚನೆ : ಸರ್ಕಾರಕ್ಕೆ ೩ ನೇ ಬಾರಿ ಮುಖಭಂಗ