ಬೆಂಗಳೂರು: ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಪ್ರಸಕ್ತ ಸಾಲಿನ ‘ಇನ್ಫೋಸಿಸ್‌ ವಿಜ್ಞಾನ‘ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದೆ. ಆರು ಜನ ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ.

ಸಮಾಜ ವಿಜ್ಞಾನ- ಲಾರೆನ್ಸ್ ಲಿಯಾಂಗ್, ಭೌತ ವಿಜ್ಞಾನ- ಯಮುನಾ ಕೃಷ್ಣನ್‌, ಗಣಿತ- ರಿತುಬರ ಮುನ್ಷಿ, ಜೀವ ವಿಜ್ಞಾನ- ಉಪೇಂದ್ರ ಎಸ್. ಬಲ್ಲಾ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ– ಸಂಘಮಿತ್ರ ಬಂದೋಪಧ್ಯಾಯ, ಮಾನವಿಕ ಶಾಸ್ತ್ರ ವಿಭಾಗದಿಂದ ಅನನ್ಯಾ ಕಬೀರ್ ಅವರಿಗೆ ಈ ಪ್ರಶಸ್ತಿ ಸಂದಿದೆ.

RELATED ARTICLES  ದೇವನಹಳ್ಳಿಯಲ್ಲಿ ಭೀಕರ ಅಪಘಾತ: ಮೂವರು MBBS ವಿದ್ಯಾರ್ಥಿಗಳ ದುರ್ಮರಣ.

ಪ್ರಶಸ್ತಿಯು ತಲಾ 65 ಲಕ್ಷ ರೂಪಾಯಿ ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. 2018ರ ಜನವರಿ 10 ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.

RELATED ARTICLES  ಉತ್ತರ ಕನ್ನಡದ ಜನರ ಕನಸು ನನಸು..?