ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ನೀಡಿರುವ ವಿಶೇಷ ಭತ್ಯೆಯನ್ನು ಅವರ ವೇತನದಿಂದ ವಸೂಲಿ ಮಾಡಲು ಇದೇ 4ರಂದು ಹೊರಡಿಸಿದ್ದ ಆದೇಶ ತಡೆಹಿಡಿಯಲು ಶಿಕ್ಷಣ ಸಚಿವ ತನ್ವೀರ್ ಸೇಠ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

2008 ಆಗಸ್ಟ್ 1ರ ಬಳಿಕ ನೇಮಕಗೊಂಡ 7,242 ಶಿಕ್ಷಕರಿಗೆ ವಿಶೇಷ ಭತ್ಯೆಯಾಗಿ ತಿಂಗಳಿಗೆ ರೂ 200 ರಂತೆ ಒಟ್ಟಾರೆ ಈವರೆಗೆ ರೂ 8.33 ಕೋಟಿ ಪಾವತಿಯಾಗಿದೆ. ಮಹಾ ಲೆಕ್ಕಪಾಲರ ವರದಿಯಲ್ಲಿ(ಸಿಎಜಿ) ಆಕ್ಷೇಪಿಸಿರುವ ಕಾರಣ ಈ ಭತ್ಯೆಯನ್ನು ಶಿಕ್ಷಕರ ವೇತನದಿಂದ ಕಡಿತ ಮಾಡಿಕೊಳ್ಳಲು ಆದೇಶ ಹೊರಡಿಸಲಾಗಿತ್ತು.

RELATED ARTICLES  ಎರಡು ದಿನಗಳ ಭಾರತ್ ಬಂದ್ ನಿಂದಾಗಿ ಆಗಿರೋ ನಷ್ಟ ಎಷ್ಟು ಗೊತ್ತಾ?..!

‘ಸಿಎಜಿ ವರದಿಯಲ್ಲಿರುವ ಅಂಶಗಳು ಸರ್ಕಾರಿ ಆದೇಶಗಳಿಗೆ ಪೂರಕವಾಗಿಲ್ಲ. ಹೀಗಾಗಿ ಶಿಕ್ಷಕರ ವೇತನದಿಂದ ಕಡಿತ ಮಾಡಿಕೊಳ್ಳಬಾರದು’ ಎಂದು ವಿಧಾನ ಪರಿಷತ್ ಸದಸ್ಯ ರಮೇಶ ಬಾಬು ಕೋರಿದ್ದರು.

RELATED ARTICLES  ಭಾಷಣದಲ್ಲಿ ಮಹಾದಾಯಿ ಬಗ್ಗೆ ಮೌನ, ಪ್ರಧಾನಿ ವಿರುದ್ಧ ಅಸಮಾಧಾನ!

ಈ ವಿಷಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗುವ ತನಕ ಇದೇ 4ರ ಆದೇಶ ತಡೆ ಹಿಡಿಯಲು ಸಚಿವರು ಸೂಚಿಸಿದ್ದಾರೆ.