ಕಾರವಾರ: ಸರ್ಕಾರದ ಯೋಜನೆಗೆ ಜಾಗ ಬಿಟ್ಟುಕೊಟ್ಟು ಈಗ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆಯುತ್ತಿರುವ ನಿರಾಶ್ರಿತರ ಸ್ಥಿತಿ ದುರದೃಷ್ಟಕರ ಎಂದು ಸ್ವರ್ಣವಲ್ಲಿ ಶ್ರೀಗಳು ವಿಷಾಧ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿಬಂಧು ಸ್ವ– ಸಹಾಯ ಸಂಘಗಳ ಒಕ್ಕೂಟ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಸಾಧನಾ ಸಮಾವೇಶದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು

RELATED ARTICLES  "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಶ್ರೀ ಮಡಿವಾಳಯ್ಯ ಸ್ವಾಮಿಗಳು.

ಕಾರವಾರ- ಅಂಕೋಲಾ ಭಾಗದಲ್ಲಿ ಕೊಂಕಣ ರೈಲು, ಸೀಬರ್ಡ್‌ ಯೋಜನೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಾರ್ವಜನಿಕರು ಜಾಗ ಬಿಟ್ಟುಕೊಟ್ಟು, ಈಗ ಜನರು ಪರಿಹಾರಕ್ಕೆ ಪ್ರತಿಭಟಿತ್ತಿದ್ದಾರೆ. ಜನರು ಈಗ ಮನೆ, ಭೂಮಿ ಕಳೆದುಕೊಂಡು ಗುಡ್ಡಗಾಡುಗಳಲ್ಲಿ ವಾಸಮಾಡುವಂತೆ ಆಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

RELATED ARTICLES  ರೇಣುಕಾ ರಮಾನಂದರ 'ಸಂಬಾರ ಬಟ್ಟಲ ಕೊಡಿಸು' ಕವನ ಸಂಕಲನಕ್ಕೆ ವಿಭಾ ಸಾಹಿತ್ಯ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಗಂಗಾಧರ ಭಟ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಮದಳ್ಳಿ ವಲಯ ಮೇಳ್ವಿಚಾರಕ ಸಂದೀಪ ನಾಯ್ಕ, ಶ್ರೀವೀರಗಣಪತಿ ಸಂಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ರವೀಂದ್ರ ಅಮದಳ್ಳಿ ಉಪಸ್ಥಿತರಿದ್ದರು.