ಶಿರಸಿ: ಜೀವನಕ್ಕೆ ಅಪಾಯಕಾರಿಯಾಗಿರುವ ಮಾದಕ ದ್ರವ್ಯ ಸಾಗಾಟ ಮತ್ತು ಮಾರಾಟ ಕಾನೂನು ಬಾಹಿರ ಕೃತ್ಯವಾಗಿದೆ. ಜೊತೆಗೆ, ಮಾದಕ ದ್ರವ್ಯ ಸೇವನೆ ಜೀವನಕ್ಕೂ ಅಪಾಯಕಾರಿಯಾಗಿದೆ. ಸಮಾಜದಲ್ಲಿ ಮಾದಕ ದ್ರವ್ಯದ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ನ್ಯಾಯಾಧೀಶ ಶಾಂತವೀರ ಶಿವಪ್ಪ ಹೇಳಿದರು.

ರಾಷ್ಟ್ರೀಯ ಕಾನೂನು ಅರಿವು ಮತ್ತು ನೆರವುಗಳ ಪೂರೈಕೆಯ ದಶ ದಿನಗಳ ಕಾನೂನು ಕಾರ್ಯಕ್ರಮದ ಅಂಗವಾಗಿ ಅವರ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ ಆಗಮಿಸಿದ ನ್ಯಾಯಾಧೀಶ ನರೇಂದ್ರ ಬಿ.ಆರ್. ಮಾತನಾಡಿ, ಕಾನೂನು ಪರಿಪಾಲನೆಯಲ್ಲಿ ಕಾನೂನಿನ ಕುರಿತು ಸಾರ್ವತ್ರಿಕ ಜಾಗೃತಿ ಮೂಡಿಸುವ ದಿಶೆಯಲ್ಲಿ ಕಾನೂನು ಸೇವಾ ಸಮಿತಿಯು ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.

RELATED ARTICLES  ಸಿ.ಎಂ ಸ್ವಾಗತಕ್ಕೆ ಸಜ್ಜುಗೊಂಡಿದೆ ಉತ್ತರಕನ್ನಡ.

ಸಾರ್ವಜನಿಕರು ಸಂವಿಧಾನಬದ್ಧ ಹಕ್ಕಿನ ಜೊತೆಯಲ್ಲಿ ಕರ್ತವ್ಯದ ಕಾರ್ಯದಲ್ಲೂ ಸಹಭಾಗಿತ್ವ ವಹಿಸಿಕೊಳ್ಳಬೇಕು. ಕೇವಲ ಹಕ್ಕಿಗಾಗಿ ಅಪೇಕ್ಷಿಸದೇ ಕರ್ತವ್ಯವನ್ನೂ ನಿರ್ವಹಿಸುವಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕೆಂದು ನ್ಯಾಯಾಧೀಶ ಶಂಕರ ರೆಡ್ಡಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿ.ವೈಎಸ್.ಪಿ. ನಾಗೇಶ ಶೆಟ್ಟಿ ಮಾತನಾಡುತ್ತಾ ಕಾನೂನು ಉಲ್ಲಂಘನೆಗೊಳಗಾದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಇಲಾಖೆಯು ಬದ್ಧವಾಗಿದ್ದು ಕಾನೂನು ಬಾಹಿರ ಚಟುವಟಿಕೆಯಾದಲ್ಲಿ ಇಲಾಖೆಯ ಗಮನಕ್ಕೆ ತರಬೇಕೆಂದು ಹೇಳಿದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ವಿಶೇಷ ಆಮಂತ್ರಿತರಾಗಿ ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಎ.ಪಿ.ಪಿ. ಎಸ್.ಎಸ್. ಇನಾಂದಾರ ಉಪಸ್ಥಿತರಿದ್ದರು.

ನಾಗರೀಕ ಹಕ್ಕುಗಳು ಮತ್ತು ಮಾದಕ ದ್ರವ್ಯ ನಿಯಂತ್ರಣ ಮತ್ತು ಕಾನೂನು ಕುರಿತ ಕಾರ್ಯಾಗಾರದಲ್ಲಿ ಮಹಿತಿಯನ್ನು ಹಿರಿಯ ವಕೀಲ ವಿ.ಜಿ. ಬಂಡಿ ಉಪನ್ಯಾಸ ನೀಡಿದರು.