ಶಿರಸಿ: ಮಾರಿಕಾಂಬಾ ಜಾತ್ರೆ ಎಂದರೆ ಅದು ಕೇವಲ ಊರ ಹಬ್ಬ ಮಾತ್ರವಲ್ಲ. ದೇಶ ವಿದೇಶದಿಂದ ಈ ಜಾತ್ರೆಗೆ ಬಂದು ದೇವರ ಆಶೀರ್ವಾದ ಪಡೆಯುವರ ಸಂಖ್ಯೆ ಕಡಿಮೆ ಇಲ್ಲ. ಈ ಪ್ರಸಿದ್ಧ ಜಾತ್ರೆಗೆ ಈ ಬಾರಿ ದೇಶದ ಪ್ರಧಾನಿಗೆ ಆಹ್ವಾನ ನೀಡಲಾಗಿದೆ. ಈ ಆಮಂತ್ರಣ ನೀಡಿರುವುದು ಇದೇ ಪಟ್ಟಣದ ಬಾಲಕಿ ಎಂಬುದು ವಿಶೇಷ.

ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ಶಿರಸಿಮಕ್ಕಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾದ ಅಮೃತಾ ಮೋದಿಗೆ ಪತ್ರ ಬರೆದ ಬಾಲಕಿ. ಅಮೃತಾ ತಾಯಿ ಮೋದಿಯವರ ಸ್ವಚ್ಛ ಭಾರತ್ ಬಗ್ಗೆ ಮಗಳಿಗೆ ತಿಳಿಸಿ ಹೇಳಿದ ನಮ್ಮ ಸುತ್ತಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಪ್ರಧಾನಿ ಬಂದು ಬಹುಮಾನ ನೀಡುತ್ತಾರೆ ಎಂದು ಹೇಳಿದ್ದಾರೆ. ಅಮ್ಮನ ಮಾತು ನಂಬಿದ ಅಮೃತಾ ಅದೇ ರೀತಿ ತನ್ನ ಸುತ್ತ ಮುತ್ತ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಿದ್ದಾಳೆ. ಅಲ್ಲದೇ ಈ ವಿಷಯವನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತಿಳಿಸಿದ್ದಾಳೆ.

RELATED ARTICLES  ಪಂ. ಷಡಕ್ಷರಿ ಗವಾಯಿ ಪುಣ್ಯ ಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ

ಮೋದಿ ಮಾಮಾ ಅಮ್ಮ ಹೇಳಿದಳು ನಮ್ಮ ಸುತ್ತ ಮುತ್ತ ಪರಿಸರವನ್ನು ಶುಚಿಯಾಗಿಟ್ಟುಕೊಂಡರೆ, ನೀವು ಬಹುಮಾನ ನೀಡುತ್ತೀರಾ ಎಂದು. ಇದೇ ಕಾರಣಕ್ಕೆ ಚಾಕಲೇಟ್ ಪೇಪರ್, ಕಾಗದ ಚೂರುಗಳನ್ನು ಕಸದ ಬುಟ್ಟಿಗೆ ಹಾಕುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದು ತಿಳಿಸಿದ್ದಾಳೆ. ಅಷ್ಟೇ ಅಲ್ಲ ತಮ್ಮೂರಿನ ಸುಪ್ರಸಿದ್ದ ಮಾರಿಕಾಂಬಾ ಜಾತ್ರೆಗೆ ಬರುವಂತೆ ವಿಶೇಷ ಆಹ್ವಾನ ನೀಡಿದ್ದಾಳೆ ಈಕೆ.

RELATED ARTICLES  ಗೌರಿ ಹತ್ಯೆ ಖಂಡಿಸಿ ಅ.5ರಂದು ದೆಹಲಿಯಲ್ಲಿ ರ‍್ಯಾಲಿ