ದಾಂಡೇಲಿ : ನಗರದ ವಾಜ್ ಮೋಟಾರ್ಸ್ ಮತ್ತು ವೆಸ್ಟರ್ನ್ ವಿಂಗ್ ಅಡ್ವೆಂಚರ್ಸ್ ಆಶ್ರಯದಲ್ಲಿ ನವಂಬರ್:18 ರಂದು ಮದ್ಯಾಹ್ನ 2 ಗಂಟೆಗೆ ಸರಿಯಾಗಿ ನಗರದ ಸುಭಾಸನಗದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಡಬಲ್ಸ್ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಹಗಲು ರಾತ್ರಿ ನಡೆಯುವ ಈ ಪಂದ್ಯಾವಳಿಯನ್ನು ಬಾಲಕರು ಮತ್ತು ಯುವಕರು/ಹಿರಿಯರು ಹೀಗೆ ಮೂರು ವಿಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, 18 ವರ್ಷದ ಒಳಗಿನವರಿಗೆ, 35 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯವರಿಗೆ ಮತ್ತು ಮುಕ್ತ ಈ ರೀತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. 18 ವರ್ಷದ ಒಳಗಿನ ವಿಭಾಗದಲ್ಲಿ ಪ್ರಥಮ ನಗದು ರೂ;3000/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ:2000/- ಮತ್ತು ಶಾಶ್ವತ ಫಲಕ, 35 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯವರ ವಿಭಾಗದಲ್ಲಿ ಪ್ರಥಮ ರೂ: 4000/- ಮತ್ತು ಶಾಶ್ವತ ಫಲಕ, ದ್ವಿತೀಯ ರೂ: 3000/- ಮತ್ತು ಶಾಶ್ವತ ಫಲಕ ಹಾಗೂ ಮುಕ್ತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ: 5000/- ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ರೂ: 3000/- ಮತ್ತು ಶಾಶ್ವತ ಫಲಕವನ್ನು ನೀಡಲಾಗುತ್ತದೆ. ನಿರ್ಣಯಕರ ತೀರ್ಮಾನವೆ ಅಂತಿಮವಾಗಿದ್ದು, ಕ್ರೀಡಾಪಟುಗಳು ಸಹಕರಿಸುವಂತೆ ಕೋರಲಾಗಿದೆ.

RELATED ARTICLES  ಬಿಎಂಟಿಸಿ ಚಾಲಕ, ನಿರ್ವಾಹಕ ಸೇರಿದಂತೆ ಹಲವು ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

ಪಂದ್ಯಾವಳಿಯಲ್ಲಿ ಭಾಗವಹಿಸಲಿಚ್ಚಿಸುವವರು ನವೆಂಬರ್ : 17 ರಂದು ಸಂಜೆ 4 ಗಂಟೆಯೊಳಗೆ ಪಂದ್ಯಾವಳಿಯ ಸಂಘಟಕರಾದ ಡಾ: ಸಲ್ಮಾನ್, ಮೊ: 9945568723, ಡಾ: ವಸೀಕ್ ಮೊ: 9886542080, ಸಚ್ಚಿನ್ ವಾಜ್ ಮೊ:8884949529, ಮಿಥುನ್ ಮೊ: 9980680527 ಗೆ ಸಂಪರ್ಕಿಸುವಂತೆ ಕೋರಲಾಗಿದೆ.

RELATED ARTICLES  ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ನೇಮಕಾತಿ.