ಯಲ್ಲಾಪುರ : ಕುಂದರಗಿ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದ ಪ್ರಥಮ ವರ್ಷದ ಶ್ರೀ ದೇವಿ ಪಾರಾಯಣ ಹಾಗೂ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ ೧೭-೧೧-೨೦೧೭ ಶುಕ್ರವಾರದಂದು ಬೆಳಗ್ಗೆ ೧೦ ಘಂಟೆಯಿಂದ ಶ್ರೀ ದೇವಿ ಪಾರಾಯಣ ಹಾಗೂ ಪೂಜಾ ಕಾರ್ಯಕ್ರಮ ಸಂಜೆ ೫.೩೦ ಕ್ಕೆ ಕಾರ್ತಿಕೊತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಒಂದು ದೇವಿ ಸಾವಿರ ವರ್ಷಗಳ ಇತಿಹಾಸ ಈ ದೇವಿಗೆ ಇದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವವನ್ನು ಆಚರಿಸುತ್ತಿರುವಾಗ ಒಂದು ದಿನ ನವರಾತ್ರಿಯಲ್ಲಿ ಆಭರಣಗಳನ್ನು ಹಾಕಿ ಪೂಜೆ ಮೂಗಿಸಿದ ನಂತರ ಆಭರಣಗಳನ್ನು ತೆಗೆಯಲು ಮರೆತು ಹೋಗಿರುತ್ತದೆ.ಆ ಒಂದು ಸಂಧರ್ಭದಲ್ಲಿ ದೇವಿಯು ಆಭರಣಗಳನ್ನು ರಕ್ಷಿಸಿಕೊಳ್ಳಲು ದೇವಿಯು ಹುತ್ತ ನಿರ್ಮಿಸಿಕೊಂಡಿದ್ದಾಳೆ ಎಂಬ ಪ್ರತೀತಿ ಇದೆ. ಇಂದಿಗೂ ಅಂದು ಹೇಗೆ ಹುತ್ತವು ಅದೇ ರೀತಿಯಲ್ಲಿ ಇನ್ನು ಹಾಗೆ ಇದೇ ಇಷ್ಟು ಇತಿಹಾಸ ಹೊಂದಿದೆ.ಕುಂದರಗಿಗೆ ಹಿಂದೆ ಕುಂತ ದುರ್ಗಿ ಎಂಬ ಹೆಸರಿತ್ತು ಅದು ಈ ಒಂದು ದೇವಿಯಿಂದ ಬಂದಿದ್ದು ಮಂದೆ ಕುಂದರಗಿ ಎಂದು ಆಯಿತು ಎಂದು ಹಿರಿಯರು ಹೇಳುತ್ತಾರೆ.ಮಾರಿಯನ್ನು ಹೊಂದಿರುವುದರಿಂದ ಮಾರಿಮಕ್ಕಿ ಆಗಿದೆ ತದನಂತರ ಅದು ಮಾರಿಕಾಂಬಾ ಅಂಥಾಯಿತು ಆದ್ದರಿಂದ ಈ ಒಂದು ದೇವಿಯ ಅನುಗ್ರಹವನ್ನು ಪಡೆದು ಹೆಚ್ಚಿನ ಸಂಖ್ಯೇಯಲ್ಲಿ ಭಕ್ತಾದಿಗಳು ಪಾಲ್ಗೋಂಡು ಶ್ರೀ ದೇವಿ ಕೃಪಗೆ ಪಾತ್ರರಾಗಬೇಕೆಂದು ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ಆದರ ಸುಸ್ವಾಗತ ಕೋರುವ
ಸಮಸ್ತ ಊರ ನಾಗರಿಕರು ಆಡಳಿತ ಮಂಡಳಿ ಹಾಗೂ ಮಾರಿಕಾಂಬಾ ಕ್ರಿಯೆಟಿವ್ಸ ಮಾರಿಮಕ್ಕಿ ಕುಂದರಗಿ

RELATED ARTICLES  ರಾಜೀವ್‍ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ