ಕಾಂಗ್ರೆಸ್ ಪಕ್ಷದ ರಾಷ್ಟಿಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡಿ ಮಾಡಲಾಗಿರುವ ಟಿವಿ ಜಾಹಿರಾತಿನಲ್ಲಿ ಪಪ್ಪು ಎಂಬ ಪದ ಬಳಸಗಿದ್ದಕ್ಕೆ ಗುಜರಾತ್ ಚುನಾವಣಾ ಆಯೋಗ ನಿಷೇಧ ಹೇರಿದೆ.
ಗುಜರಾತ್ ನಲ್ಲಿ ಚುನಾವಣಾ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡುವಂತಹಾ ಪಪ್ಪು ಎಂಬ ಪದಬಳಕೆಯ ಒಂದು ಜಾಹಿರಾತನ್ನು ಖಾಸಗಿ ಟಿವಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಈ ಜಾಹಿರಾತಿಗೆ ಗುಜರಾತ್ ಚುನಾವಣಾ ಅಯೋಗವು ನಿಷೇಧ ಹೇರಿದೆ.
ಗುಜರಾತಿ ಭಾಷೆಯಲ್ಲಿ ಪಪ್ಪು ಎಂದರೆ ನಾಚಿಕೆ ಇಲ್ಲದವನು ಎಂದು ಅರ್ಥ. ಇದೊಂದು ಮಾನಹಾನಿಕಾರ ಜಾಹಿರಾತು ಆಗಿದೆ. ಇಂತಹ ಮಾನಹಾನಿಕಾರಕ ಪದ ಬಳಸಬಾರದು. ಇದರ ಬದಲಿ ಜಾಹಿರಾತು ಹಾಕಲು ಚುನಾವಣಾ ಆಯೋಗ ಕೋರಿದೆ.