ಶಾಲಾ ವಿದ್ಯಾರ್ಥಿಗಳ ಪುಸ್ತಕಗಳ ಹೊರೆ ಇನ್ನು ಕಡಿಮೆಯಾಗಲಿದೆ. ಶಾಲಾ ವಿದ್ಯಾರ್ಥಿಗಳು ಮಣಭಾರದ ಬ್ಯಾಗ್ ಹೊತ್ತು ಸುಸ್ತಾಗುವುದರಿಂದ ನಿರಾಳವಾಗಲಿರುವರು. ಕೇಂದ್ರ ಸರಕಾರವು “ಈ-ಬಸ್ತ” (ಈ-ಬ್ಯಾಗ್) ಕಾರ್ಯಕ್ರಮವನ್ನು ಮುಂದುವರೆಸುತ್ತಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಂತ್ರಿಯಾಗಿರುವ ಪ್ರಕಾಶ್ ಜಾವ್ಡೇಕರ್ ರವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಶಾಲಾ ವಿದ್ಯಾರ್ಥಿಗಳ ಬ್ಯಾಗ್ ನ ಹೊರೆಯನ್ನು ಕಡಿಮೆ ಮಾಡುವ ಕೆಲಸ ಆರಂಭವಾಗಿದೆ. ವಿದ್ಯಾರ್ಥಿಗಳು ಲ್ಯಾಪ್ ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ನಲ್ಲಿ ತಮ್ಮ ತರಗತಿಗೆ ತಕ್ಕದಾದ ಪಠ್ಯ ವಿಷಯಗಳನ್ನು ಡೌನ್ ಲೋಡ್ ಮಾಡಿಕೊಂಡು ಓದಬಹುದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉತ್ಸಾಹ ತೋರುತ್ತಿದ್ದಾರೆ. ಈ ಬಸ್ತ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳು ಸುಲಭವಾಗಿ ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

RELATED ARTICLES  ಅನಂತಕುಮಾರ್ ಹೆಗಡೆಯವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ವಿಡಿಯೋ.

ಮುಂದೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಈ ಬಸ್ತ ದೊಂದಿಗೆ ಡಿಜಿಟಲ್ ಬ್ಲ್ಯಾಕ್ ಬೋರ್ಡ್ ಗಳನ್ನೂ ಕೂಡಾ ಬಳಸಲಾಗುವುದು. ದೇಶದ ಎಲ್ಲಾ ವಿದ್ಯಾರ್ಥಿಗಳನ್ನು ಡಿಜಿಟಲ್ ಶಿಕ್ಷಣ ಪದ್ದತಿಯೊಂದಿಗೆ ಜೋಡಿಸುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಕೆಲವು ಕಡೆ ಈ ಬಸ್ತ ಹಾಗೂ ಈ ಪಾಠಶಾಲೆಗಳನ್ನು ನಡೆಸಲಾಗುತ್ತಿದೆ. ಒಂದನೇ ತರಗತಿಯಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಇದರ ಲಾಭವಾಗಲಿದೆ. ಈಗಾಗಲೇ 53 ವಿಧದ ಈ ಬಸ್ತ ಹಾಗೂ 2350 ವಿಧದ ಸಂಬಂಧಿತ ಸಾಮಾಗ್ರಿಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ 43801 ಬಾರಿ ಈ ಸಾಮಾಗ್ರಿಗಳನ್ನು ಡೌನ್ ಲೋಡ್ ಮಾಡಲಾಗಿದೆ ಎಂದು ಜಾವ್ಡೇಕರ್ ಹೇಳಿದರು.

RELATED ARTICLES  ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ಆಯ್ಕೆ