ಕಾರವಾರ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಡೆಸಲಾಗುತ್ತಿರುವ ಚಿತ್ರೋತ್ಸವ ಸಪ್ತಾಹಕ್ಕೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶಬಾಬು ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಹಾಜರಿದ್ದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿಮಂತರಾಜು, ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಪರಭಾಷಾ ಚಿತ್ರಗಳ ಹಾವಳಿಯಿಂದ ನಲುಗುತ್ತಿರುವ ಕನ್ನಡ ಚಲನಚಿತ್ರಗಳತ್ತ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ 7 ಕನ್ನಡ ಚಲನಚಿತ್ರಗಳನ್ನು ಪ್ರತಿದಿನ ಬೆಳಗ್ಗೆ ಪ್ರದರ್ಶನದ ಮಾಡಲಾಗುತ್ತಿದೆ ಎಂದರು.
ಅಮರಾವತಿ ಚಲನಚಿತ್ರಸಹ ನಿರ್ದೇಶಕ ಶ್ಯಾಮಸುಂದರ, ನಗರಸಭೆಯ ಪೌರಾಯುಕ್ತ ಯೋಗೇಶ್ವರ ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದ್ದರು. ಇಂದು ಅಮರಾವತಿ ಚಿತ್ರವನ್ನು ಸಾರ್ವಜನಿಕರು ವೀಕ್ಷಿಸಿದರು. ನಾಳೆ ಕಿರಿಕ್ ಪಾರ್ಟಿ, 19ರಂದು ರಾಮ ರಾಮ ರೇ, 20 ರಂದು ಮುದಿಪು (ತುಳು ಚಿತ್ರ), 21ರಂದು ಯೂ ಟರ್ನ್, 22ರಂದು ಅಲ್ಲಮ, 23 ರಂದು ಮಾರಿಕೊಂಡವರು ಚಿತ್ರಗಳ ಪ್ರದರ್ಶನ ನಡೆಯಲಿದೆ.