ಭಟ್ಕಳ :ಭಟ್ಕಳ ಹೊನ್ನಾವರ ಶಾಸಕರು ಕ್ಷೇತ್ರದ ಅನೇಕ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಜನಪರವಾದ ಕಾರ್ಯಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರಕಾರದ ಜನಪರವಾದ ನೀತಿಯಿಂದಾಗಿ ಅವರಿಗೆ ಅದುಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇನ್ನಷ್ಟು ಬಲಗೊಳ್ಳಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ವಡಗೇರಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಲ್ಲಿಯ ಜಲವಳ್ಳಿ ಪಂಚಾಯತ್ ಕೆರವಳ್ಳಿಯಲ್ಲಿ ಸೇರಿದ ಮನೆ ಮನೆಗೆಕಾಂಗ್ರೆಸ್ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಮಾತನಾಡಿ ರಾಜ್ಯದಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಜನರಿಗೆ ನೀಡಿದ ಬಹುತೇಕಭರವಸೆಗಳನ್ನು ಈಡೇರಿಸಿದೆ.ಕಾರ್ಯಕರ್ತರು ಅಸಹಾಯಕರು ಮತ್ತು ಬಡಜನರಿಗೆ ಸರಕಾರದ ವಿವಿಧ ಯೋಜನೆಗಳ ಲಾಭ ವನ್ನು ತಲುಪಿಸಲು ನೆರವಾಗುವಮೂಲಕ ಹೆಚ್ಚು ಹೆಚ್ಚು ಸಮಾಜ ಮುಖಿಕಾರ್ಯ ಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

RELATED ARTICLES  ಹೊಲನಗದ್ದೆ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ.

ಜಿ.ಪಂ.ಮಾಜಿ ಸದಸ್ಯ ಕ್ರಸ್ಣ ಜೆ.ಗೌಡ ,ತಾ.ಪಂ.ಸದಸ್ಯ ಅಣ್ಣಯ್ಯ ನಾಯ್ಕ ,ಲೋಕೇಶ್ ನಾಯ್ಕ್ ತುಂಬೊಳ್ಳಿ,ಅನಂತ ನಾಯಕ ಮಾತನಾಡಿದರು.ಸ್ಥಳೀಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಾರುತಿ ಆಚಾರ, ಜಾಕಿ ರೊಡ್ರಿಗೀಸ ,ರಾಘವೇಂದ್ರ ನಾಯ್ಕ ಇನ್ನು ಮುಂತಾದ ಹಲವಾರು ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಮನೆ ಮನೆಗೆ ಭೇಟಿಯಾಗಿ ಸರ್ಕಾರ ದ ಸಾಧನೆಯ ವಿಶೇಷ ಹೊತ್ತಿಗೆಯ ಪುಸ್ತಿಕೆಯನ್ನು ಸಾರ್ವಜನಿಕರಿಗೆ ವಿತರಣೆ ಮಾಡಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕಲೆಹಾಕಲಾಯಿತು.

RELATED ARTICLES  ಅಘನಾಶಿನಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ.