ಇನ್ನೇನು ಚುನಾವಣೆಯ ರಣ ಕಹಳೆ ಮೊಳಗಬೇಕು ಅಷ್ಟೇ. ಆದರೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಯಾರಿಗೆ ಬಿಜೆಪಿ ಟಿಕೆಟ್ ಎಂಬುದೇ ಜಿಜ್ಞಾಸೆ.

ಆದರೆ ಕಮಲ ‌ಪಾಳಯದಲ್ಲಿ ಹೊಸ ಹುಮ್ಮಸ್ಸು ಹಾಗೂ ವೈವಿದ್ಯಮಯ ಕಾರ್ಯಗಳ ಮೂಲಕ ಕಾಣಿಸಿಕೊಂಡವರು ನಾಗರಾಜ ನಾಯಕ ತೊರ್ಕೆ. ನಾಗರಾಜ ನಾಯಕರ ಸರಳ ವ್ಯಕ್ತಿತ್ವ ಹಾಗೂ ಉದಾರ ಗುಣಗಳಿಗಳಿಗೆ ಅನೇಕಾನೇಕರು ಮಾರು ಹೋಗಿದ್ದಾರೆ ಎಂದರೂ ತಪ್ಪಲ್ಲ. ಹೀಗಾಗಿಯೇ ನಾಗರಾಜ ನಾಯಕರಿಗೆ ಬಿಜೆಪಿ ಚುನಾವಣಾ ಸ್ಪರ್ಧಾ ಅವಕಾಶ ನೀಡಿದರೆ ಅವರನ್ನು ಬೆಂಬಲಿಸುವ ಅನೇಕರನ್ನು ನಾವು ಗುರ್ತಿಸಬಹುದು ಎನ್ನುತ್ತಾರೆ ಕುಮಟಾದ ರಾಜಕೀಯ ಲೆಕ್ಕಾಚಾರ ಮಾಡುವ ಹಲವರು.

ಶಿಕ್ಷಣ ಕ್ಷೇತ್ರ ಹಾಗೂ ಕಲೆ ಸಂಸ್ಕ್ರತಿಯ ನೆಲೆಗಟ್ಟಿನಲ್ಲಿ ತಮ್ಮದೇ ಸಂಸ್ಥೆಯನ್ನು ಹುಟ್ಟುಹಾಕಿ ಜನಾನುರಾಗಿಗಳಾಗಿ ಬೆಳೆಯುತ್ತಿರುವ ನಾಗರಾಜ ನಾಯಕ ತೊರ್ಕೆ ಮನದಲ್ಲಿ ಅಪ್ಪಟ ಅಪರಂಜಿ ,ನಿಘರ್ವಿ ಎಂಬುದರಲ್ಲಿ ಎರಡು ಮಾತಿಲ್ಲ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

RELATED ARTICLES  ಭಟ್ಕಳದ ಮುಂಡಳ್ಳಿ ಜನತೆಗೆ ಮಂಗಗಳ ಕಾಟ! ಕೋತಿಗಳ ಕಾಟಕ್ಕೆ ಕಂಗಾಲಾಗಿದ್ದಾರೆ ಸಾರ್ವಜನಿಕರು.

ಸಮಾಜ ಸೇವೆಯ ಧ್ಯೇಯೋದ್ದೇಶದಿಂದ 2016 ಮೇ 16 ರಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ಹುಟ್ಟು ಹಾಕಿದರು.ನೊಂದವರಿಗೆ,ಅಸಹಾಯಕರಿಗೆ ತಮ್ಮ ನೆರವಿನ ಹಸ್ತ ಚಾಚುವುದರ ಜೊತೆಗೆ ಶಿಕ್ಷಣ, ಕ್ರೀಡೆ, ಕಲೆ, ಸಾಹಿತ್ಯ, ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಲೇ ಬಂದ ಇವರು ಜನಾನುರಾಗಿಗಳಾಗಿ ಹಾಗೂ ಸಮಾಜವನ್ನು ಅಭ್ಯೂದಯದತ್ತ ಕೊಂಡೊಯ್ಯುವ ಮನದವರೆಂದೇ ಎಲ್ಲರ ಮಾತು.

ಶಿಕ್ಷಣದಿಂದ ಮಾತ್ರ ಮನುಷ್ಯನ ಅಭಿವೃದ್ದಿ ಸಾಧ್ಯ ಎಂಬುದನ್ನು ಪ್ರತಿಪಾದಿಸುತ್ತ ಗ್ರಾಮೀಣ ಭಾಗದ ಹಾಗೂ ಅನೇಕ ಬಡ ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಧನ ಸಹಾಯದೊಂದಿಗೆ ಇತರೇ ಸೌಲಭ್ಯಗಳನ್ನು ಒದಗಿಸಿ ಅವರ ಶೈಕ್ಷಣಿಕ ಬದುಕನ್ನು ಹಸನಾಗಿಸಿದ್ದಾರೆ ನಾಗರಾಜ ನಾಯಕ ತೊರ್ಕೆ. ಹೀಗಾಗಿ ಪಾಲಕರ ಬೆಂಬಲ ಹಾಗೂ ಶಾಲೆ ಮತ್ತು ಸುತ್ತಲ ಸಾರ್ವಜನಿಕ ವಲಯದಲ್ಲಿ ಇವರು ಗುರುತಿಸಿಕೊಳ್ಳಬಲ್ಲರು ಇದು ಅವರ ರಾಜಕೀಯ ಬದುಕಿಗೂ ಉಪಯುಕ್ತವಾಗಬಹುದು ಎಂಬುದು ಸಾಮಾನ್ಯ ಲೆಕ್ಕಾಚಾರ.

RELATED ARTICLES  ಹಾಡು ಹಗಲೇ ಅಂಗಡಿಯ ಪಟ್ಟಿಗೆಯಿಂದ ಹಣ ಎಗರಿಸಿದ ಕಳ್ಳರು

ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡಾ ವಿಭಾಗದಲ್ಲಿ ಅವಿರತ ಕಾರ್ಯಗಳ ಮೂಲಕ ತಮ್ಮನ್ನು ತೊಡಗಿಸಿಕೊಂಡ ನಾಗರಾಜ ನಾಯಕ ತೊರ್ಕೆ ಅವರ ಅಪಾರ ಬೆಂಬಲಿಗರು ಇವರ ರಾಜಕೀಯ ಭವಿಷ್ಯದ ಹೊಸ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಕುಮಟಾ ಹೊನ್ನಾವರದ ಸ್ಪರ್ಧಿಯಾಗಿ ನಾಗರಾಜ ನಾಯಕರಿಗೆ ಅವಕಾಶ ಸಿಕ್ಕರೆ ಹಗಲಿರುಳೂ ದುಡಿಯುವ ಅನೇಕರನ್ನು ಅವರು ಗಳಿಸಿಕೊಂಡಿದ್ದಾರೆ.

ನಾನೂ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದು, ನನಗೆ ಸಿಕ್ಕರೆ ಪ್ರಾಮಾಣಿಕವಾಗಿ ದುಡಿಯುವ ಮನತೋರಿದ ಇವರು, ಇದನ್ನು ಹೊರತುಪಡಿಸಿ ಬಿಜೆಪಿಯ ಟಿಕೆಟ್ ಯಾರಿಗೇ ಸಿಕ್ಕರೂ ನನ್ನ ಬೆಂಬಲವಿದೆ ಎನ್ನುವ ನಾಗರಾಜ ನಾಯಕ ತೊರ್ಕೆಯವರು ಬಿಜೆಪಿಯ ಸಹೃದಯ ಕಾರ್ಯಕರ್ತ ಎಂಬುದನ್ನು ಸಾಬೀತುಪಡಿಸಿದ್ದಾರೆ. ನಾಗರಾಜ ನಾಯಕರವರ ಒಳ್ಳೆಯತನಕ್ಕೆ ಬೆಂಬಲವಿಡುವ ಹಲವರು ನಾಗರಾಜ ನಾಯಕರವರಿಗೆ ಟಿಕೆಟ್ ಸಿಗಲಿ. ಅವರನ್ನು ನಾವೆಲ್ಲಾ ಬೆಂಬಲಿಸುತ್ತೇವೆ ಅಂತಿದ್ದಾರೆ ಅವರ ಬೆಂಬಲಿಗರು.