ಕಾರವಾರ : ಕೊನೆಗೂ ವಿಕಲಚೇತನ ನಯಾಜ್ ಮುಖದಲ್ಲಿ ಮಂದಹಾಸ ಮೂಡಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರ ಖಡಕ್ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ಜಿಲ್ಲಾ ಹಿರಿಯ ನಾಗರೀಕರ ಸಬಲೀಕರಣ ಮತ್ತು ವಿಕಲಚೇತನ ಇಲಾಖೆ, ನಯಾಜ್ ಗೆ ತ್ರಿಚಕ್ರ ವಾಹನ ವಿತರಣೆ ಮಾಡಿ ಅವನ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.

ಜಿಲ್ಲಾ ಹಿರಿಯ ನಾಗರೀಕರ ಸಬಲೀಕರಣ ಮತ್ತು ವಿಕಲಚೇತನ ಇಲಾಖೆಯವರು, ನಯಾಜ್ ಫೋಟೋ ತೆಗಿಸಿ ತಿಂಗಳುಗಳೇ ಕಳೆದಿದ್ರೂ ಅವನಿಗೆ ತ್ರಿಚಕ್ರ ವಾಹನ ನೀಡದೇ ಸತಾಯಿಸಿದ್ದರು. ಈ ಬಗ್ಗೆ ಕನ್ನಡ ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷ ರಘುನಾಯ್ಕ್ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಈ ಬಗ್ಗೆ ನ್ಯೂಸ್ ಕೋಡ್ ಕೂಡ ವರದಿ ಮಾಡಿತ್ತು. ವರದಿ ಬಿತ್ತರವಾಗಿದ್ದೇ ತಡ ಕಾರ್ಯಪ್ರವೃತ್ತರಾದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದ ಬೆನ್ನಲ್ಲೇ ಇಲಾಖೆಯವರು ನಯಾಜ್ ಗೆ ತ್ರಿಚಕ್ರ ವಾಹನ ನೀಡಿದ್ದಾರೆ.

RELATED ARTICLES  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಚನ್ನಮಲ್ಲ ಸ್ವಾಮಿಗಳು

ಇದೇ ವೇಳೆ ಇಲಾಖೆಯು 2೦ಕ್ಕೂ ಹೆಚ್ಚು ಮಂದಿಗೆ ತ್ರಿಚಕ್ರ ವಾಹನ ನೀಡದೇ ಸತಾಯಿಸಿತ್ತು. ನ್ಯೂಸ್ ಕೋಡ್ ನಲ್ಲಿ ವರದಿ ಬಿತ್ತರಗೊಂಡ ಬಳಿಕ ಎಲ್ಲಾ ಫಲಾನುಭವಿಗಳಿಗೂ ತ್ರಿಚಕ್ರ ವಾಹನ ವಿತರಿಸಿದೆ.

RELATED ARTICLES  ಭಟ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ನಿಂದ ಶಾಸಕರಾದ ಸುನಿಲ್ ನಾಯ್ಕ ಅವರಿಗೆ ಸನ್ಮಾನ : ಹಳೆಯ ದಿನಗಳನ್ನು ನೆನಪಿಸಿದ ಶಾಸಕರು.