ಕೆಲಸದ ಒತ್ತಡ, ಮಾನಸಿಕ ತಳಮಳ, ಬಹುಬೇಗ ಬಳಲುವುದು …ಹೀಗೆ ಕಾರಣ ಯಾವುದೇಆದರೂ ಬಹುಪಾಲು ಜನರು ಪ್ರತಿದಿನ ಮೈ ಕೈ ನೋವಿನಿಂದ ನರಳುತ್ತಿದ್ದಾರೆ. ಈ ಕಾರಣದಿಂದಾಗಿ ಇತರೇ ಆರೋಗ್ಯ ಸಮಸ್ಯೆಗಳೂ ತಲೆದೋರುತ್ತಿವೆ. ದೇಹದಲ್ಲಿ ಉಂಟಾದ ನೋವನ್ನು ಗುಣಪಡಿಸಿಕೊಳ್ಳಲು ಬಹಳಷ್ಟು ಜನ ಆಲೋಪತಿ ಔಷದಗಳ ಮೊರೆಹೋಗುತ್ತಾರೆ. ಆದರೆ, ಈ ಔಷದಿಳ ಉಪಯೋಗದಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ ಯಾವುದೇ ಅಡ್ಡಪರಿಣಾಮಗಳಿರದೆ ಸಹಜವಾಗಿ ದೇಹದ ನೋವನ್ನು ಕಡಿಮೆಮಾಡಲು ಸಾಧ್ಯವಿದೆ. ದೇಹದ ನೋವುಗಳನ್ನು ಹೋಗಲಾಡಿಸುವ ಪವರ್ ಫುಲ್ ಆಯಿಲ್ ಬಗ್ಗೆ ತಿಳಿದುಕೊಳ್ಳೋಣ.

RELATED ARTICLES  ಮೇಕಪ್ ಇಲ್ಲದೇ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!

ಸ್ವಲ್ಪ ಆಲೀವ್ ಆಯಿಲ್ ತೆಗೆದುಕೊಂಡು ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಕದಡಬೇಕು. ಈಗ ಒಂದು ಪೇಸ್ಟ್ ತಯಾರಾಗುತ್ತದೆ. ಶರೀರದಲ್ಲಿ ನೋವಿರುವ ಬಾಗಕ್ಕೆ ಈ ಪೇಸ್ಟನ್ನು ಹಚ್ಚಿದರೆ ನೋವು ಕಡಿಮೆಯಾಗುತ್ತದೆ.ಈ ಮಿಶ್ರಣವನ್ನು ಬಳಿಯುವುದರಿಂದ ಬೆನ್ನು ನೋವು, ಕೀಲುಗಳ ನೋವು, ಭುಜಗಳ ನೋವನ್ನು ಕಡಿಮೆಮಾಡಬಹುದು. ಆಲೀವ್ ಆಯಿಲ್ ಹಾಗೂ ಉಪ್ಪಿನಲ್ಲಿರುವ ನೈಸರ್ಗಿಕ ಔಷದ ಗುಣಗಳು ಹಲವು ರೀತಿಯ ನೋವುಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸಮಾಡುತ್ತವೆ. ಹಲವು ದಿನಗಳ ಕಾಲ ಇದನ್ನು ಉಪಯೋಗಿಸುತ್ತಿದ್ದಲ್ಲಿ ಯಾವುದೇ ತರದ ನೋವು ಹತ್ತಿರ ಸುಳಿಯುವುದಿಲ್ಲ.

RELATED ARTICLES  ತಕ್ಷಣವೇ ಹೊಟ್ಟೆಯ ಕೊಬ್ಬನ್ನು ಕರಗಿಸಲು ಹೀಗೆ ಮಾಡಿ