ತೊಗರಿ ಬೇಳೆಯಲ್ಲಿ ತಯಾರಿಸಿದ ವೆಜ್‌ ಟಿಕ್ಕಾ ರುಚಿಕರವಾದ ವೆಜ್ ಸ್ಟಾಟರ್ಸ್ ಆಗಿದೆ. ಇದನ್ನು ತರಕಾರಿ ಜೊತೆ ಟಿಕ್ಕಾ ಮಾಡಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದಕ್ಕೆ ಬಳಸುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನಕ್ಕೆ ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ…

ಸಾಮಗ್ರಿಗಳು
1. ನೆನೆಸಿ ರುಬ್ಬಿದ ತೊಗರಿ ಬೇಳೆ – 1/2 ಕಪ್
2. ಈರುಳ್ಳಿ ಸೊಪ್ಪು ಹೆಚ್ಚಿದ್ದು – 1/2 ಕಪ್
3. ಖಾರದ ಪುಡಿ – ಸ್ವಲ್ಪ
4. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
5. ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನ ಕಾಯಿ – 2 ಚಮಚ
6. ಚಾಟ್ ಮಸಾಲ – 1/2 ಕಪ್
7. ಉಪ್ಪು – ಚಿಟಿಕೆ
8. ತಂದೂರಿ ಬಣ್ಣ – ಸ್ವಲ್ಪ
9. ಎಣ್ಣೆ – ಕರಿಯಲು
ಮಾಡುವ ವಿಧಾನ: ನೆನೆಸಿ ರುಬ್ಬಿದ ಬೇಳೆಗೆ ಈರುಳ್ಳಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಮಿಶ್ರಣ, ಹಸಿಮೆಣಸಿನ ಕಾಯಿ, ಖಾರದ ಪುಡಿ, ಚಾಟ್ ಮಸಾಲ, ತಂದೂರಿ ಬಣ್ಣ, ಉಪ್ಪು, ಮಿಕ್ಕ ಈರುಳ್ಳಿ ಸೊಪ್ಪು ಸೇರಿಸಿ ಗಟ್ಟಿಯಾಗಿ ಕಲಸಿ. ಇವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರಿಯಿರಿ.

RELATED ARTICLES  ಹಿರಿಯ ವೈದಿಕರಾದ ವಿದ್ವಾನ್ ಸುಬ್ರಾಯ ಭಟ್ಟ ಗಡಿಗೆಹೊಳೆ ಇನ್ನಿಲ್ಲ.