ಕುಮಟಾ: ಕೊಂಕಣ ರೈಲ್ವೆ ಗೆ ಸಂಬಂಧಿಸಿ ಮಿರ್ಜಾನ ನಲ್ಲಿರುವ ರೈಲ್ವೆ ಗೇಟ್ ಶಿಫ್ಟ್ ಮಾಡಲು ಕಾಮಗಾರಿ ಪ್ರಾರಂಭಗೊಂಡಿದ್ದು ಅದು ಸುತ್ತಮುತ್ತಲಿನ ಜನತೆಗೆ ತಲೆನೋವಾಗಿ ಪರಿಣಮಿಸಿದೆ . ಸುತ್ತಮುತ್ತಲಿನ ಅನೇಕ ಜನರಿಗೆ ಈ ಗೇಟ್ ಸ್ಥಳಾಂತರದಿಂದ ಸಮಸ್ಯೆ ಉಂಟಾಗುತ್ತಿದ್ದು ಇದನ್ನು ಪರಿಹರಿಸುವಂತೆ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ .
ರೈಲ್ವೆ ಗೇಟ್ ಸ್ಥಳಾಂತರವನ್ನು ನಿಲ್ಲಿಸುವಂತೆ ಸ್ಥಳೀಯ ಜನರ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ದಿನಕರ ಶೆಟ್ಟಿ ಈ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು . ಸ್ಥಳೀಯರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಶೆಟ್ಟಿಯವರ ಪ್ರತಿಭಟನೆಯ ನಂತರದಲ್ಲಿ ಈ ಕಾಮಗಾರಿಯನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ .
ಈ ಗೇಟಿನ ಸ್ಥಳಾಂತರದಿಂದ ಇಲ್ಲಿಯ ಸುತ್ತಮುತ್ತಲಿನ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗುವ ಕಾರಣದಿಂದಾಗಿ ಇಲ್ಲಿ ಬೇರೆಗೆ ತನ್ನ ನಿರ್ಮಿಸುವ ಬದಲು ಅಂಡರ್ ಪಾಸ್ ವ್ಯವಸ್ಥೆ ಮಾಡುವಂತೆ ಜನತೆ ಮನವಿ ಮಾಡಿದ್ದಾರೆ .ಈ ಹೋರಾಟದಲ್ಲಿ ಜನತೆಯ ಜೊತೆಗಿದ್ದು ಜನತೆಗೆ ಅನುಕೂಲ ಮಾಡಿಕೊಡುವ ಭರವಸೆಯನ್ನು ದಿನಕರ ಶೆಟ್ಟಿ ವ್ಯಕ್ತಪಡಿಸಿದ್ದಾರೆ .ಇದೇ ಸಂದರ್ಭದಲ್ಲಿ ಜನತೆಯ ಕಷ್ಟಗಳಿಗೆ ನಾನು ಸ್ಪಂದಿಸಿ ಅವರ ಕಷ್ಟ ನಿವಾರಿಸುವ ಪ್ರಯತ್ನ ಮಾಡುವುದಾಗಿ ಅವರು ಜನತೆಗೆ ಭರವಸೆ ನೀಡಿದರು.
ಒಟ್ಟಾರೆ ಸದ್ಯದ ಮಟ್ಟಿಗೆ ಕಾಮಗಾರಿಯೇನೋ ಸ್ಥಗಿತವಾಗಿದೆ ಆದರೆ ಮುಂದೆ ಯಾವ ನಿಟ್ಟಿನಲ್ಲಿ ಕಾಮಗಾರಿ ಚಾಲನೆಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ .