ಕುಮಟಾ : ಹೆಗಡೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಹಾಗೂ ಶ್ರೀ ಕಾನಮ್ಮ ಪರಮೇಶ್ವರಿ ದೇವಿ ಮತ್ತು ಶ್ರೀ ಹಿರೇಬೀರ ದೇವರ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು. ಪ್ರತೀ ವರ್ಷ ನಡೆಯುವ ಕಾರ್ಯಕ್ರಮ ಎಂದಿನಂತೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂಪನ್ನವಾಯಿತು.

RELATED ARTICLES  ಕರಾಟೆ ತರಗತಿ ಉದ್ಘಾಟನಾ ಕಾರ್ಯಕ್ರಮ.

ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ಕಾನಮ್ಮ ದೇವಸ್ಥಾನದಿಂದ ಹೆಗಡೆಯ ಮುಖ್ಯ ರಸ್ತೆಯ ಮೂಲಕ ಹಿರೇಬೀರ ದೇವಸ್ಥಾನ ಕ್ಕೆ ಆಗಮಿಸಿ ನಂತರ ಶ್ರೀ ದೇವಿಯ ದೇವಾಲಯ ಕ್ಕೆ ಆಗಮಿಸಿ ಸಂಪನ್ನ ಗೊಂಡಿತು.

RELATED ARTICLES  ಹoಪಿ ಕನ್ನಡ ವಿಶ್ವವಿದ್ಯಾಲಯದ ಮಾರ್ಗದರ್ಶಕರಾಗಿ ಡಾ. ಕೃಷ್ಣಮೂರ್ತಿ ಭಟ್ಟ

ಹೆಗಡೆ ಮುಖ್ಯ ರಸ್ತೆಯ ಪ್ರತಿಯೊಂದು ಅಂಗಡಿಕಾರರು ಹಾಗೂ ಮನೆಯವರು ತಾಯಿಗೆ ಶೃದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಪುನೀತರಾದರು. ಪಟಾಕಿ ಸಿಡಿಮದ್ದುಗಳ ಸೇವೆಯೂ ನಡೆಯಿತು.