ಹೊನ್ನಾವರ: ಪಟ್ಟಣ ಪಂಚಾಯತ ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ ಇವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ಸದಸ್ಯರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಮನವಿ ನೀಡಿದ್ದರು. ಅದರನ್ವಯ ಶನಿವಾರ ಪಟ್ಟಣ ಪಂಚಾಯತ ಸಭಾಭವನದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಾಭಿತುಪಡಿಸಲು ಸಭೆ ಕರೆಯಲಾಗಿದ್ದು, ಉಪಾಧ್ಯಕ್ಷೆ ಶರಾವತಿ ಸುರೇಶ ಮೇಸ್ತ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ವೇಳೆ 13 ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ವ್ಯಕ್ತಪಡಿಸಿದರು. ಇದರಿಂದ ಜೈನಾಬಿ ಸಾಬ ಪ.ಪಂ. ಅಧ್ಯಕ್ಷೆ ಸ್ಥಾನ ಬಿಡುವಂತಾಗಿದೆ.

RELATED ARTICLES  ಗೋಕರ್ಣದ ಕುಡ್ಲೆ ಬೀಚ್’ನಲ್ಲಿ ವ್ಯಕ್ತಿಯ ಶವ : ಸಾವಿನ ಸುತ್ತ ಅನುಮಾನದ ಹುತ್ತ.!!

ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ ಎರಡು ದಿನದ ಹಿಂದೆ ಕಾಂಗ್ರೇಸ ಪಕ್ಷದ 14 ಸದಸ್ಯರಿಗೆ ಅಧ್ಯಕ್ಷೆ ಜೈನಾಬಿ ಸಾಬ್ ಪರವಾಗಿ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಲಾಗಿತ್ತು ಆದರೆ ಪಕ್ಷದ ವಿಪ್‍ನ್ನು ಉಲ್ಲಂಘಿಸಿದ ಸದಸ್ಯರಾದ ರವೀಂದ್ರ ಶಿವಪ್ಪ ನಾಯ್ಕ, ರಾಜಶ್ರೀ ಬಾಲಕೃಷ್ಣ ನಾಯ್ಕ, ಜಮೀಲಾ ಮುನಾಫ ಶೇಖ, ತುಳಸಿದಾಸ ಪುಲ್ಕರ್ ಇವರ ಮೇಲೆ ಜಿಲ್ಲಾಧಿಕಾರಿಗಳಿಗೆ ಹಾಗೂ ಪಕ್ಷದ ಹೈಕಮಾಂಡಿಗೆ ದೂರು ನೀಡಲಾಗುವುದು ಇಂದಿನ ಕಾನೂನು ಹೋರಾಟಕ್ಕೆ ಕ್ರಮಕೈಗೊಳ್ಳಲಾಗುವುದು. ಹಾಲಿ ಉಪಾಧ್ಯಕ್ಷೆಯಾಗಿರುವ ನಮ್ಮ ಪಕ್ಷದ ಶರಾವತಿ ಸುರೇಶ ಮೇಸ್ತ ಮುಂದಿನ ಆದೇಶದವರೆಗೆ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಿದರು.

RELATED ARTICLES  ಕುಮಟಾದಲ್ಲಿ ಯಶಸ್ವಿಯಾದ ಉಚಿತ ಎಲುಬು ಮತ್ತು ಮೂಳೆ ತಪಾಸಣಾ ಶಿಬಿರ

ಪ.ಪಂ. ಅಧ್ಯಕ್ಷೆ ಜೈನಾಬಿ ಇಸ್ಮಾಯಿಲ್ ಸಾಬ್ ಮಾತನಾಡಿ ಸದಸ್ಯರೊಬ್ಬರು, ಇನ್ನೊಬ್ಬರ ಪರವಾಗಿ ರಾಮತೀರ್ಥದಲ್ಲಿ ಬಾರ್ ನಡೆಸಲು ಅನುಮತಿ ಕೇಳಿ ಫೈಲ್ ತೆಗೆದುಕೊಂಡು ಬಂದಿದ್ದರು, ಸಾರ್ವಜನಿಕರ ವಿರೋಧ ಇರುವುದರಿಂದ ಈ ಅನುಮತಿಯನ್ನು ನೀಡಲಿಲ್ಲ. ಅದಕ್ಕೆ ಒಪ್ಪದ ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಅಲ್ಲದೆ, ಅಧ್ಯಕ್ಷ ಚುನಾವಣೆ ವೇಳೆ ನನ್ನನ್ನು ಬೆಂಬಲಿಸುವುದಾಗಿ ಹೇಳಿ ಹಣ ಪಡೆದವರ ದಾಖಲೆ ನನ್ನ ಬಳಿ ಇದೆ ಅದನ್ನು ಸಮಯ ಬಂದಾಗ ಬಹಿರಂಗ ಪಡಿಸುವುದಾಗಿ ತಿಳಿಸಿದರು.