ಕಾರವಾರ: ರೋಟರಿ ಕ್ಲಬ್ ಕಾರವಾರ ಮತ್ತು ಮೊಬೈಲ್ ವ್ಯಾಪಾರಸ್ಧರ ಸಂಘದ ಸಂಯುಕ್ತ ಆಶ್ರಯದಲ್ಲಿ ರೋಟರಿ ಶತಾಬ್ದಿ ಭವನದಲ್ಲಿ ಸ್ವಾಲಂಭಿಯಾಗಲು ಸಹಾಯಕವಾಗುವ ಮೊಬೈಲ್ ಉದ್ಯೋಗ ಕಾರ್ಯಗಾರವನ್ನು ಎರ್ಪಡಿಸಲಾಗಿತ್ತು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ರಾಜೇಶ ವೇರ್ಣೆಕರ ವಹಿಸಿದ್ದರು.
ವೃತ್ತಿ ಸೇವಾ ಡೈರಕ್ಟರಾದ ರಾಘವೇಂದ್ರ ಪ್ರಭುರ ಮಾತನಾಡಿ, ತಮ್ಮ ರೋಟರಿ ಸಂಸ್ದೆಯು ಪ್ರತಿ ವರ್ಷದಂತೆ ಯುವಕರಿಗೆ ಸ್ವ ಉದ್ಯೋಗದಲ್ಲಿ ಉತ್ತೇಜನ ನೀಡಿ ಜೀವನದಲ್ಲಿ ಮುಂದೆ ಬರಲು ಸಹಾಯಕವಾಗಲು ಇಂತಹ ಕಾರ್ಯಗಾರಗಳನ್ನು ಏರ್ಪಡಿಸುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ಪ್ರಗತಿಸಾದಿಸಲು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೇಶ ವೇರ್ಣೆಕರ. ತಮ್ಮ ರೋಟರಿ ಸಂಸ್ದೆಯು ಸ್ದಳೀಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಸಹಾಯವಾಗುವ ಹಾಗೂ ಉಪಯೋಗವಾಗುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಕೂಲ ಮಾಡಿಕೊಟ್ಟಿರುವುದಾಗಿ ತಿಳಿಸಿದರು.

RELATED ARTICLES  ಅಂಗನವಾಡಿ ಕಾರ್ಯಕರ್ತೆಯರನ್ನು ಸರಕಾರ ನಿರ್ಲಕ್ಷ್ಯಿಸಿದೆ : ಶಾಸಕ ದಿನಕರ ಶೆಟ್ಟಿ ಬೇಸರ

ಮೊಬೈಲ್ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಿಥುನ ರೇವಣಕರ ಮಾತನಾಡಿ, ಮೊಬೈಲ್ ವ್ಯಾಪಾರದಿಂದ ಹೇಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ ಎಂಬುದನ್ನು ತಿಳಿಸುತ್ತಾ, ಯಾರಾದರೂ ಶಿಬಿರಾರ್ಥಿಗಳು ಮೊಬೈಲ್ ರಿಪೇರಿ ತರಬೇತಿಯನ್ನು ಪಡೆಯಲು ಮುಂದೆ ಬಂದಲ್ಲಿ ಅಂತವರಿಗೆ ಬರುವ ದಿನಗಳಲ್ಲಿ ಉಚಿತವಾಗಿ ತಮ್ಮ ಸಂಘದಿಂದ ತರಬೇತಿ ನೀಡಲಾಗುವುದು ಎಂದರು.

RELATED ARTICLES  ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಕೆನರಾ ಎಕ್ಸಲೆನ್ಸ್ ಪಿ.ಯು ವಿದ್ಯಾರ್ಥಿಗಳ ಸಾಧನೆ.

ನಂತರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಗೋಪಾಲ ಕೃಷ್ಣ ಮಾತನಾಡಿ, ಮೊಬೈಲ ವ್ಯಾಪಾರದಲ್ಲಿಯ ಹಲವು ಹಂತಗಳ ಬಗ್ಗೆ ಮತ್ತು ಒಮ್ಮೆ ನುರಿತರೆ ಆರ್ಥಿಕ ಸ್ಥಿತಿಯನ್ನು ಹೇಗೆ ಉತ್ತಮಗೊಳಿಸಿಕೊಳ್ಳಬಹುದು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಮಿನಿನ ಪುಡ್ತಾಡೋ, ಸುರಜ ಗಾಂವಕಾರ, ನಾಗರಾಜ ಜೋಶಿ, ಅಮರನಾಥ ಶೆಟ್ಟಿ, ಅರ್ಚನಾ ಶೆಟ್ಟಿ, ಮೋಹನ ನಾಯ್ಕ, ಮಾರುತಿ ಕಾಮತ, ಕೇಶವ ಕಾಮತ, ಸುರೇಶ ನಾಯ್ಕ, ಸುನೀಲ ಸೋನಿ ಹಾಗೂ ಸದಸ್ಯರಾದ ಸುರಜ ಪಟೇಲ ಮುಂತಾದವರು ಹಾಜರಿದ್ದರು.