ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲೀಗ ನಡೆಯಬಾರದ್ದು ನಡೆದು ಹೋಗಿದೆ. ಪುಟ್ಟ ಗೌರಿ ತಮ್ಮ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟಿದ್ದಾಳೆ. ಅಂಥದ್ದೇನಾಯ್ತು ಅಂತ ಕೇಳ್ತೀರಾ? ಪುಟ್ಟ ಗೌರಿ ಸತ್ತೋದ್ಲು ಕಣ್ರೀ…

ಹೌದು, ಇಷ್ಟು ದಿವಸ ಟ್ರೋಲ್ ಪೇಜ್ ಗಳು, ಸಾಮಾಜಿಕ ಜಾಲತಾಣ ಹಾಗೂ ಕಿರುತೆರೆ ವೀಕ್ಷಕರನ್ನು ಮರಂಜಿಸುತ್ತಿದ್ದ ಪುಟ್ಟ ಗೌರಿಯನ್ನು ಇನ್ಮುಂದೆ ನೋಡಲು ಸಾಧ್ಯವಿಲ್ಲ.. ಯಾಕಂದ್ರೆ ಪುಟ್ಟ ಗೌರಿ ಇನ್ನಿಲ್ಲ..!!? ಗಾಬರಿಯಾಗ್ಬೇಡಿ, ಪುಟ್ಟ ಗೌರಿ ಸತ್ತೋದ್ಳು.. ಅಂದ್ರೆ ಸ್ವತಃ ಪುಟ್ಟ ಗೌರಿಯೇ ಸತ್ತು ಹೋಗಿಲ್ಲ ಬದಲಾಗಿ ಪುಟ್ಟ ಗೌರಿ ಪಾತ್ರ ಸತ್ತು ಹೋಗಿದೆ. ಪುಟ್ಟ ಗೌರಿ ಹೋಗಿ ಈಗ ಕರೀಷ್ಮಾ ಹುಟ್ಟಿಕೊಂಡಿದ್ದಾಳೆ.

RELATED ARTICLES  ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ.

ಸದಾ ಅಳುಮುಂಜಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪುಟ್ಟ ಗೌರಿ ಇದೀಗ ಫುಲ್ ಮಾಡ್ರನ್ ಗೌರಿಯಾಗಿ ನೋಡಬಹುದು. ಅಷ್ಟುಕ್ಕೂ ಈ ಕರೀಷ್ಮಾ ಯಾರು? ಪುಟ್ಟ ಗೌರಿ ಹೋಗಿ ಕರೀಷ್ಮಾ ಬರಲು ಕಾರಣವೇನು? ಪುಟ್ಟ ಗೌರಿ ಏನಾದಳು? ಎಲ್ಲದಕ್ಕೂ ಉತ್ತರ ಇಲ್ಲಿದೆ.

ಗೌರಿ ಕಷ್ಟ ನೋಡಿ ಬೇಜಾರಾಗಿದ್ದ ಮಂದಿಗೆ ಇದೀಗ ಚೇಂಜ್ ಸಿಕ್ಕಿದೆ. ಹೊಸ ಗೆಟಪ್, ಹೊಸ ಹೆಸರು, ಹೊಸ ಪಾತ್ರ ಎಲ್ಲವೂ ನೋಡುಗರನ್ನು ಸೆಳೆಯಲಿದೆ. ಫಟಾಫಟ್ ಅಂತ ಇಂಗ್ಲೀಷ್ ಮಾತನಾಡುತ್ತಾ ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟ ಗೌರಿ ಎಲ್ಲರಿಗೂ ಇಷ್ಟವಾಗಲಿದ್ದಾಳೆ.

RELATED ARTICLES  ಬಾಂಬ್ ಗಾಗಿ ಉತ್ತರಕನ್ನಡದ ಹಲವೆಡೆ ಪೊಲೀಸ್ ಕಾರ್ಯಾಚರಣೆ : ಅದೇಕೆ ಅಂತೀರಾ?

ಧಾರಾವಾಹಿಯಲ್ಲಿ ಸಾಗರಿ ಪಾತ್ರಧಾರಿ ಗೌರಿಯನ್ನು ಕೊಂದು ಬಿಡುತ್ತಾರೆ, ಆದರೆ ಗೌರಿ ನಿಜವಾಗಿಯೂ ಬದುಕಿರುತ್ತಾರೆ. ಗೌರಿ, ಅವರು ಮಾಡಿದ ತಪ್ಪನ್ನ ಸಾಬೀತು ಪಡಿಸಲು ಕರೀಷ್ಮಾ ಗೆಟಪ್ ನಲ್ಲಿ ಬಂದಿದ್ದಾರೆ. ಹೀಗಾಗಿ ಗೌರಿ ಪಾತ್ರ ಬದಲಾಗಿದೆ. ಕರೀಷ್ಮಾ ಬಂದಿದ್ದಾರೆ.