ಕುಮಟಾ: ಬಹುಜನರ ಬೇಡಿಕೆಯಾಗಿದ್ದ ಅಘನಾಶಿನಿ ಯಿಂದ ತದಡಿಗೆ ತೆರಳುವ ಮಿನಿ ಬಾರ್ಜ್ ಸೇವೆ ಇಂದು ಪ್ರಾರಂಭವಾಗಿದೆ . ಅಘನಾಶಿನಿ ಯಿಂದ ತದಡಿಗೆ ಕೇವಲ ಒಂದು ಕಿಲೋಮೀಟರ್ ಅಂತರವಿದ್ದು ಇಲ್ಲಿ ಜಲ ಮಾರ್ಗವೇ ಮೂಲಾಧಾರವಾಗಿತ್ತು.
ಈಗ ಮಿನಿ ಬಾರ್ಜ್ ಸೇವೆಯಿಂದಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ . 2016-17 ನೇ ಸಾಲಿನಲ್ಲಿ ಎರಡೂವರೆ ಕೋಟಿ ರೂಪಾಯಿ ಮಿನಿ ಬಾರ್ಜ್ ಗಾಗಿ ಹಣ ಮಂಜೂರಾಗಿತ್ತು . ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಶ್ರೀಮತಿ ಶಾರದಾ ಶೆಟ್ಟಿ ಜನತೆಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ .
ಹಂಗಾರಕಟ್ಟೆಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಬಾರ್ಜ್ ನಿರ್ಮಾಣವಾಗಲಿದ್ದು ರ್ಯಾಂಪ್, ತಂಗುದಾಣ ಮೂಲ ಸೌಕರ್ಯಗಳು ಇದರಲ್ಲಿ ಸೇರಿಕೊಳ್ಳುತ್ತದೆ ಎಂಬುದಾಗಿ ಶಾಸಕರು ಮಾಹಿತಿ ನೀಡಿದ್ದಾರೆ .
ಇವಿಷ್ಟೇ ಅಲ್ಲದೇ ಹೊಸ ಬಾರ್ಜ್ ನಂತರದಲ್ಲಿ ಯಾವುದಾದರೂ ಬಾರ್ಜ್ ಕೆಟ್ಟು ನಿಂತಲ್ಲಿ ಈ ಚಿಕ್ಕ ಬಾರ್ಜ್ ಸಹಾಯ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು .