ಯುವಜನತೆಯ ಆಕರ್ಷಣೆಯನ್ನು ಮನದಲ್ಲಿಟ್ಟುಕೊಂಡು ಯಮಹಾ ಪ್ರತಿಸಲವೂ ಒಂದಲ್ಲ ಒಂದು ಹೊಸ ಹೊಸ ವಿನ್ಯಾಸ ಹಾಗೂ ಆವಿಷ್ಕಾರಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಮಹಾ Rx 100 ನಿಂದ ಹಿಡಿದು Fz ಹಾಗೂ R15 ತನಕ ಬಿಡುಗಡೆಗೊಂಡ ಪ್ರತಿ ಮಾಡೆಲ್ ಬೈಕ್ ಗಳು ಮಾರುಕಟ್ಟೆಯಲ್ಲಿ ತನ್ನದೇ ಹಿಡಿತ ಸಾಧಿಕೊಂಡಿದೆ. ಇದಕ್ಕೆ ಪೂರಕವಾಗಿ ಈ ಬಾರಿ ಯಮಾಹಾ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಮೂರು ಚಕ್ರಗಳ ಬೈಕ್ ಮಾರುಕಟ್ಟೆಗೆ ಇಳಿಸಲಿದೆ. ಈ ಬೈಕನ್ನು ನೋಡುತ್ತಲೇ “ವಾವ್” ಎಂದು ಉಧ್ಗರಿಸದಿರಲಾರರು. ಅದೇ ವೇಳೆ ಇದರ ಬೆಲೆ ಕೇಳಿದರೆ “ಓಹ್” ಎಂದೂ ಕೂಡಾ ನೆಗೆದು ಬೀಳುಲಿರುವರು.

RELATED ARTICLES  ಚಾಲನೆಯಲ್ಲಿಲ್ಲದ ದೂರವಾಣಿ ಸಂಖ್ಯೆ ನೀಡಿ ಜನರಿಗೆ ಗೊಂದಲ : ಸಮಸ್ಯೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಆಗ್ರಹ : ಮನವಿ ಮಾಡಿದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ

ಯಮಹಾ ತನ್ನ ಮುಂದಿನ ಸರದಿಯಲ್ಲಿ Leaning Multi-Wheeler (LMW) ಅಂದರೆ ತಿರುವು ಮುರುವು ರಸ್ತೆಗಳಲ್ಲಿ ವೇಗವಾಗಿ ಬಾಗಿಕೊಂಡು ಸಾಗಲು ಸಹಕಾರಿಯಾಗಿ ಮುಂಭಾಗದಲ್ಲಿ ಬಲಶಾಲಿಯಾದ ಶಾಕ್ಸ್ ಗಳನ್ನು ಹೊಂದಿರುವ ಮೂರು ಚಕ್ರಗಳನ್ನು ಹೊಂದಿರುವ Yamaha NIKEN ಬೈಕ್ ಅನ್ನು ಪರಿಚಯಿಸುತ್ತಿದೆ. ಇದರ ಬಾಡಿ ಡಿಸೈನ್ ಅಭೂತಪೂರ್ವ ಸಸ್ಪೆನ್ಶನ್ ಅನ್ನು ಸಂಪೂರ್ಣವಾಗಿ ಉಪಯೋಗಿಸುವಂತೆ ರಚಿಸಲಾಗಿದೆ. ಅಪ್ ಸೈಡ್ ಡೌನ್ ಆಗಿರುವ ಫೋರ್ಕ್ಸ್ ಗಳೊಂದಿಗೆ 15-inch ಅಗಲವಾದ ಮುಂಭಾಗದ ಎರಡು ಚಕ್ರಗಳು ಬೈಕ್ ಸವಾರಿಯನ್ನು ಇನ್ನಷ್ಟು ಅನುಕೂಲ ಮಾಡಿಕೊಡುತ್ತವೆ.

RELATED ARTICLES  ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ 

ಸುಮಾರು 847cc ಸಾಮರ್ಥ್ಯವಿದೆ ಹಾಗೂ ಇದರ ಇಂಜಿನ್ ಮೂರು ಸಿಲಿಂಡರ್ ಗಳನ್ನು ಹೊಂದಿದ್ದು ಕೂಲೆಂಟ್ ಸೌಲಭ್ಯವಿರುವ ಕಾರಣ ಇಂಜಿನ್ ಬೆಚ್ಚಗಾಗುವುದನ್ನು ತಡೆಯುತ್ತದೆ. ಇಟೆಲಿಯಲ್ಲಿ ನವೆಂಬರ್ 6 ರಂದು ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಹಾಗೂ ಸಂಪೂರ್ಣ ಮಾಹಿತಿ ಬಿಡುಗಡೆಯಾಗಿದೆ.