ನವದೆಹಲಿ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆ ವಿರೋಧಿಸಿ ರಜಪೂತ ಕರ್ಣಿ ಸೇನಾ ಸಂಘಟನೆ ಡಿ. 1ರಂದು ಭಾರತ ಬಂದ್‌ಗೆ ಕರೆ ನೀಡಿದೆ.

‘ಪದ್ಮಾವತಿ’ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ಬಿಡುಗಡೆ ವಿರೋಧಿಸಿ ಡಿ. 1ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಜಪೂತ ಕರ್ಣಿ ಸೇನಾ ಸಂಘಟನೆ ಅಧ್ಯಕ್ಷ ಲೋಕೇಂದ್ರ ಸಿಂಗ್‌ ಕಾಲ್ವಿ ಅವರು ಶನಿವಾರ ಹೇಳಿದ್ದಾರೆ.

RELATED ARTICLES  ಭಾರತ-ರಷ್ಯಾ:ಇಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಿವೆ ಉಭಯ ರಾಷ್ಟ್ರಗಳು.

ಚಿತ್ರ ವಿರೋಧಿಸಿ ಶುಕ್ರವಾರ ರಾಜಸ್ಥಾನ, ಮಧ್ಯಪ್ರದೇಶ, ವಾರಣಾಸಿ, ಬಿಹಾರ, ಛತ್ತೀಸಗಡ, ತಮಿಳುನಾಡಿನ ಕೊಯಮತ್ತೂರುಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಮತ್ತೊಂದೆಡೆ ವಕೀಲರೊಬ್ಬರು, ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಲಸಿಕೆ ಲಭ್ಯತೆಯ ವಿವರ.

ಬಿಹಾರದ ಪಟ್ನಾದಲ್ಲಿ ರಜಪೂತ ಮಹಿಳೆಯರು ‘ಪದ್ಮಾವತಿ’ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಲೋಕೆಂದ್ರ ಸಿಂಗ್ ಕಾಲ್ವಿ ಭಾಗವಹಿಸಿದ್ದರು.