ಹೊನ್ನಾವರ :ಮಟ್ಕಾ ದಂಧೆಯಲ್ಲಿ ಲಂಚ ಪಡೆಯುತ್ತಿದ್ದ ಹೊನ್ನಾವರ ಪೊಲೀಸ್ ಠಾಣೆಯ ಮುರುಳಿಧರ್ ನಾಯ್ಕ ಇವರನ್ನು ಎ.ಸಿ.ಬಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಹಫ್ತಾ ಪಡೆಯುತ್ತಿದ್ದ ವೇಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES  ದೀಪಾವಳಿ (✍ರೇಷ್ಮಾ ಉಮೇಶ)

ಈತನು ಹೊನ್ನಾವರದ ಅನೇಕ ಕಡೆಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿ ಹಫ್ತಾ ವಸೂಲಿ ಮಾಡುತ್ತಿದ್ದ ಎನ್ನಲಾಗುತ್ತಿದೆ. ನಿನ್ನೆ ಚಂದ್ರಹಾಸ ನಾಯ್ಕ ಇವರು ಎ.ಸಿ.ಬಿ ಅಧಿಕಾರಿಗಳಿಗೆ ದೂರು ನೀಡಿದ್ದು ಇಂದು ಹೊನ್ನಾವರಕ್ಕೆ ಬಲೆ ಬೀಸಿದ ಡಿ.ವೈ.ಎಸ್.ಪಿ ಗಿರೀಶ್ ಅವರ ತಂಡ ಮುರುಳಿಧರ್ ನಾಯ್ಕ ಇವರು 22 ಸಾವಿರ ರೂಪಾಯಿ ಹಫ್ತಾ ಪಡೆಯುವಾಗ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

RELATED ARTICLES  ಶ್ರೀ ಶ್ರೀ ವಿಶ್ವನಾಥ ಸ್ವಾಮಿಗಳಿಗೆ 'ಗೋಕರ್ಣ ಗೌರವ'