ಲಕ್ನೋ: ಅನುಮಾನಾಸ್ಪದದ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿಯ ಬಳಿಯ ಚೆಕ್‌ಪೋಸ್‌ಟ್ ಸನಿಹ 8 ಜನರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ರಾಜಾಸ್ತಾನದ ನಾಗ್‌ಪುರ ಜಿಲ್ಲೆಯ ಖಲಿನಗರ್ ಬಸ್ನಿ ಗ್ರಾಮದ ಕಾರಿನಲ್ಲಿ ತೆರಳುತ್ತಿದ್ದು, ಇವರನ್ನು ಅನುಮಾನದ ಆಧಾರದಲ್ಲಿ 2 ಗಂಟೆ ವೇಳೆ ಬಂಧಿಸಲಾಗಿದೆ. ಬಂಧಿತರೆಲ್ಲಾ ತಾವು ಯಾತ್ರಿಗಳು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಬಂಧಿತರನ್ನು ಸುಮಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದ್ದು, ಆನಂತರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಅಡಿಷನಲ್ ಎಸ್‌ಪಿ ರಾಜೇಶ್ ಸಹ್ನಿ ನೇತೃತ್ವದ ಭಯೋತ್ಪಾದನಾ ನಿಗ್ರಹ ದಳ ಇವರನ್ನೆಲ್ಲಾ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಇವರನ್ನೆಲ್ಲಾ ಲಕ್ನೋಗೆ ಕರೆತರಲಾಗಿದೆ.
ಮಾಹಿತಿಯಂತೆ ಬಂಧಿತರ ವಿರುದ್ಧ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ. ಆದರೂ, ಅನುಮಾನ ಬಂದ ಕಾರಣ ಬೇರೆ ಬೇರೆ ಆಯಾಮದಲ್ಲಿ ಇವರನ್ನು ವಿಚಾರಣೆ ಮಾಡಲಾಗುತ್ತಿದೆ. ಅಯೋಧ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 5ರಂದು ವಿಚಾರಣೆ ಆರಂಭಿಸಲಿದೆ.