ಭಟ್ಕಳ : ತಾಲೂಕಿನಲ್ಲಿ ಐ ಆರ್ ಬಿ ರಸ್ತೆ ಅಗಲಿಕರಣಕ್ಕಾಗಿ ಕಟ್ಟಡ ತೆರವು ಕಾರ್ಯಾಚರಣೆ ಮಾಡುವ ನೆಪದಲ್ಲಿ ಮತ್ತೆ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿರುವುದು ಬೆಳಕಿಗೆ ಬಂದಿದೆ.
ಭಟ್ಕಳ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು ರಸ್ತೆ ಅಗಲಿಕರಣ ನೆಪದಲ್ಲಿ ಐ ಆರ್ ಬಿ ಕಂಪನಿಯ ಮುಖಾಂತರ ಪದೆ ಪದೆ ಬಡ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತೆ ಬಂದಿದೆ . ಭಟ್ಕಳ ತಾಲೂಕಿನ ಬೈಲೂರಿನಿಂದ ಐ ಆರ್ .ಬಿ ಕಂಪನಿಯು ತೆರವು ಕಾರ್ಯಾಚರಣೆ ಪ್ರಾರಂಭ ಮಾಡಿದ್ದು ಈ ಸಂದರ್ಬದಲ್ಲಿ ಮುರ್ಡೆಶ್ವರದ ಗುಮ್ಮನ ಹಕ್ಲಿನಲ್ಲಿ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಮನೆಯರು ಮಹಿಳೆಯರು ನಮಗೆ ಎರಡು ದಿನದ ಸಮಯವನ್ನು ಕೋಡಿ ನಾವು ನಮ್ಮ ಮನೆಯ ವಸ್ತುಗಳನ್ನು ಬೇರೆ ಕಡೆಗೆ ಸಾಗಿಸುತ್ತೆವೆ ನಾವು ಈ ಸ್ಥಳವನ್ನು ತೆರವು ಗೋಳಿಸುತ್ತೆವೆ ಎಂದು ಅಂಗಲಾಚಿದರು ಸಹ ಯಾವುದೆ ಕರುಣೆಯನ್ನು ತೋರದೆ ಐ ಆರ್ ಬಿ ಕಂಪನಿಯ ಅಧಿಕಾರಿಗಳು ಅವರ ಮನೆಯನ್ನು ನಿರ್ದಾಕ್ಷಿಣ್ಯವಾಗಿ ತೇರವುಗೋಳಿಸಿದ್ದು ಬೇಳಕಿಗೆ ಬಂದಿದೆ ಈ ಸಂದರ್ಬದಲ್ಲಿ ತೇರವಾದ ಮನೆಯ ಮಹಿಳೆ ರತ್ನ ನಾಗೇಶ ನಾಯ್ಕ ಮಾಧ್ಯಮದ ಎದುರು ತಮ್ಮ ನೋವನ್ನು ತೋಡಿಕೊಳ್ಳುತ್ತಾ ನಾವು ಅಧಿಕಾರಿಗಳಲ್ಲಿ ನಮಗೆ ಎರಡು ದಿನದ ಸಮಯವನ್ನು ಕೇಳಿದ್ದೆವು ಆದರೆ ಅಧಿಕಾರಿಗಳು ಯಾವುದೆ ದಯವನ್ನು ತೋರದೆ ನಿರ್ದಾಕ್ಷಿಣ್ಯವಾಗಿ ನಮ್ಮ ಮನೆಯನ್ನು ಕೆಡುವಿ ಹಾಕಿದ್ದಾರೆ ಮನೆಯಲ್ಲಿ ನಮ್ಮ ದೇವರಾದ ತಿರುಪತಿ ದೇವರ ಗಂಟು ಇದ್ದರು ಸಹ ಅದನ್ನು ಲೆಕ್ಕಿಸದೆ ನಮ್ಮ ಮನೆಯನ್ನು ನಾಶಮಾಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ಅಭಿವೃದ್ದಿ ಆಗಬೇಕು ಅದನ್ನು ಎಲ್ಲರು ಒಪ್ಪಲೆ ಬೇಕಾದ ಸಂಗತಿಯಾಗಿದೆ ಆದರೆ ಅಭಿವೃದ್ದಿಯ ಹೆಸರಲ್ಲಿ ದಬ್ಬಾಳಿಕೆ ನಡೆಸುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ದೊಡ್ಡ ಪ್ರಶ್ನೇಯಾಗಿದೆ ಕಟ್ಟಡಕ್ಕೆ ಪರಿಹಾರವನ್ನು ನಿಡಿದ್ದಾರೆ ನಾವು ಕಟ್ಟಡವನ್ನು ತೇರವು ಮಾಡುತ್ತೆವೆ ಎಂದು ಅಧಿಕಾರಿಗಳು ಹೇಳುತ್ತಾರೆ ಇದು ಒಪ್ಪಲೆ ಬೇಕಾದ ಸಂಗತಿಯಾಗಿದೆ ಆದರೆ ಎಲ್ಲದಕ್ಕೂ ಮೋದಲು ಮಾನವಿಯತೆ ದೊಡ್ಡದು ಮಾನವಿಯತೆಯೆ ಇಲ್ಲದೆ ಬಡವರ ಮೇಲೆ ಕಾನೂನು ಎಂಬ ಅಸ್ತ್ರವನ್ನು ಪ್ರಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ ಕಾನೂನು ಸಾರ್ವಜನಿಕರಿಗಾಗಿ ಮಾಡಲ್ಪಟ್ಟಿದ್ದು ಆದರೆ ಅಧಿಕಾರಿಗಳು ಅದೆ ಕಾನೂನು ಅಸ್ತ್ರವನ್ನು ಬಡ ಅಮಾಯಕರ ಮೇಲೆ ಪ್ರಯೋಗ ಮಾಡುವುದು ಯಾವ ನ್ಯಾಯ ಸ್ವಾಮಿ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಈ ಸಂದರ್ಬದಲ್ಲಿ ತಾಲೂಕ ತಹಶಿಲ್ದಾರರಾದ ವಿ.ಎನ್ ಬಾಡ್ಕರ್ ಮಾತನಾಡಿ ರಾಷ್ಟ್ರೀಯ ಹೇದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೇದ್ದಾರಿ ಅಗಲಿಕರಣಕ್ಕಾಗಿ ತೆರವು ಕಾರ್ಯಾಚರಣೆಯನ್ನು ಮಾಡಲಾಗುತ್ತಿದೆ ಅತಿಕ್ರಮಣ ಭೂಮಿಗಳಲ್ಲಿರುವ ಸ್ವತ್ತುಗಳಿಗೂ ಕೂಡಾ ಪರಿಹಾರವನ್ನು ಕೋಡಲಾಗಿದೆ ಇಂದು ಅಂತಹ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ ಈ ರಾಷ್ಟ್ರೀಯ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸ ಬೇಕು ಎಂದು ಹೇಳಿದರು. ಅಭಿವೃದ್ದಿಯ ಹೆಸರಿನಲ್ಲಿ ಇತ್ತಿಚೇಗೆ ದೇಶದಾದ್ಯಂತ ಕಾನೂನನ್ನು ಮುಂದಿಟ್ಟುಕ್ಕೊಂಡು ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಮಾಮುಲಾಗಿದೆ.