ಬೆಂಗಳೂರು: ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿದರೇ 5 ಕೋಟಿ ರೂ. ಬಹುಮಾನ ನೀಡುವುದಾಗಿ ಮೀರತ್ ನ ಕ್ಷತ್ರಿಯ ಸಮುದಾಯ ಬೆದರಿಕೆ ಹಾಕಿದೆ.

ಪದ್ಮಾವತಿ ಸಿನಿಮಾದಲ್ಲಿ ರಾಣಿ ಪದ್ಮಿನಿಯನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಚಾತ್ರೀಯ ಸಮಾಜ್‌ ನ ಅಭಿಷೇಕ್‌ ಠಾಕೂರ್‌ ಸೋಮ್‌ ಅವರು ದೀಪಿಕಾಗೆ ಬೆದರಿಕೆ ಹಾಕಿ ಆಕೆಯ ತಲೆ ಕತ್ತರಿಸಿದರೇ 5 ಕೋಟಿ ರೂ ಇನಾಮು ಘೋಷಿಸಿದ್ದಾರೆ.

RELATED ARTICLES  ಒಂದನೇ ತರಗತಿಗೆ ಸೇರಿಸಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ವಯೋಮಿತಿ ನಿಗದಿ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಾಲಿವುಡ್ ಕಲಾವಿದರು ಮತ್ತು ಸಿನಿಮಾ ತಯಾರಕರನ್ನು ರಕ್ಷಿಸಲು ಸಾಧ್ಯವಿಲ್ಲ. ಎಂದಿರುವ ಅವರು, ಸಿನಿಮಾವನ್ನು ನಿಷೇಧಿಸಬೇಕು ಹಾಗೂ ನಟಿ ದೀಪಿಕಾ ಪಡುಕೋಣೆ ದೇಶ ಬಿಟ್ಟು ಹೋಗಬೇಕು, ಇಲ್ಲದಿದ್ದರೇ ಆಕೆಯ ತಲೆಯನ್ನು ಕತ್ತರಿಸಲಾಗುವುದು, ಕ್ಷತ್ರಿಯ ಸಮಾಜದ ಪರವಾಗಿ ಘೋಷಿಸುತ್ತಿರುವುದಾಗಿ ತಿಳಿಸಿದ್ದಾರೆ.

RELATED ARTICLES  ಕರ್ನಾಟಕದ ಕುಳ್ಳ ಖ್ಯಾತಿಯ ಚಿತ್ರನಟ ದ್ವಾರಕೀಶ್ ಇನ್ನಿಲ್ಲ.

ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿಗೆ ಈ ಬಗ್ಗೆ ಗೊತ್ತಿಲ್ಲ, ದೀಪಿಕಾ ಅವರು ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡು ನಮ್ಮ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಡಿಸೆಂಬರ್‌ 1 ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಕರ್ನಿ ಸೇನೆ ಭಾರತ್‌ ಬಂದ್‌ಗೆ ಕರೆ ನೀಡಿದೆ.