ಹಿಂದಿನ ಕಾಲದಲ್ಲಿ ಈಗ ಸಿಗುತ್ತಿದ್ದ ಪ್ರಮಾಣದಷ್ಟು ಆಹಾರ ಸಿಗುತ್ತಿರಲಿಲ್ಲ. ಬಡತನ, ಹೆಚ್ಚಿನ ಮಕ್ಕಳಿಂದಾಗಿ ಪ್ರತಿಯೊಬ್ಬರ ಊಟದ ಪ್ರಮಾಣವು ಕಡಿಮೆ ಇರುತ್ತಿತ್ತು. ಆ ಹಸಿದ ಹೊಟ್ಟೆಯನ್ನು ತಣಿಸಲು ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆಯನ್ನು ಹಾಕಿ ಹಸಿವನ್ನು ಕಟ್ಟುತ್ತಿದ್ದರು. ಹಾಗಾದ್ರೆ ಈಗ ಊಟ ಆರಾಮಾಗಿ ಸಿಗ್ತಾ ಇದಿಯಲ್ಲ ಮತ್ತು ಯಾಕೆ ತಣ್ಣೀರಿನ ಪಟ್ಟಿ ಹಾಕೋಬೇಕು ಅನ್ನೋವರಿಗೆ ಇಲ್ಲಿದೆ ಉತ್ತರ..
*೧) ತೂಕ ಕಡಿಮೆ ಮಾಡಲು*:
ಊಟ ಮುಂಚೆ ೧೫ ನಿಮಿಷಗಳ ಕಾಲ ಹೊಟ್ಟೆಗೆ ತಣ್ಣೀರಿನ ಪಟ್ಟಿಯನ್ನು ಹಾಕಿದ್ದಲ್ಲಿ ಹಸಿವು ಕಡಿಮೆಯಾಗುವುದಲ್ಲದೆ ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು. ಇದರಿಂದ ಅಧಿಕ ಕ್ಯಾಲೊರಿ ಸೇವನೆಯು ನಿಯಂತ್ರಣಕ್ಕೆ ಬಂದು ತೂಕವು ಇಳಿಕೆಯಾಗುತ್ತದೆ.
*೨) ಜೀರ್ಣ ಶಕ್ತಿ ಹೆಚ್ಚಾಗಲು:*
ಖಾಲಿ ಹೊಟ್ಟೆಯ ಮೇಲೆ ತಣ್ಣೇರಿನ ಬಟ್ಟೆಯನ್ನು ಹಾಕಿ ಕಟ್ಟಿದಲ್ಲಿ ಜೀರ್ಣಾಂಗಗಳಿಗೆ ರಕ್ತ ಪರಿಚಲನೆ ಅಧಿಕವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಜೀರ್ಣರಸವು ಅಧಿಕವಾಗಿ ಸ್ರವಿಸಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗುತ್ತದೆ.
*೩) ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು:*
ಏನೇ ಮಾಡಿದರೂ ಹೊಟ್ಟೆ ಕರಗಿಸಲು ಆಗ್ತಾ ಇಲ್ವಾ? ಹಾಗಿದ್ದರೆ ಹೊಟ್ಟೆ ಮೇಲೆ ತಣ್ಣೇರಿನ ಬಟ್ಟೆನ ೧ ಗಂಟೆಗಳ ಕಾಲ ಹಾಕಿಡಿ. ಇದರಿಂದ ಅಲ್ಲಿರುವ ಸ್ನಾಯುಗಳು ಸಂಕುಚಿತಗೊಂಡು ಬೊಜ್ಜು ರಕ್ತಗತವಾಗುತ್ತದೆ ಮತ್ತು ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ಸಂಗ್ರಹಗೊಂಡ ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ಸೊಂಟದ ಮತ್ತು ಹೊಟ್ಟೆಯ ಸುತ್ತಳತೆಯು ಕಡಿಮೆಯಾಗುತ್ತದೆ.
*೪) ಮಲಬದ್ಧತೆ ನಿವಾರಣೆಗೆ:*
ಊಟವಾದ ಎರಡು ಗಂಟೆಗಳ ನಂತರ ಕೆಳ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಕರುಳಿನ ಚಾಲನೆ ಅಧಿಕವಾಗಿ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ದಿನವೂ ಇದನ್ನು ಪಾಲಿಸಿದ್ದಲ್ಲಿ ಮಲಬದ್ಧತೆಯಿಂದ ಮುಕ್ತಿಪಡೆಯಬಹುದು.
*೫) ನಿದ್ರಾಹೀನತೆಗೆ :*
ದಿನವೂ ರಾತ್ರಿ ಮಲಗುವ ಮೊದಲು ೨೦ ನಿಮಿಷಗಳ ಕಾಲ ಹೊಟ್ಟೆಯ ಮೇಲೆ ತಣ್ಣೇರಿನ ಪಟ್ಟಿ ಹಾಕಿದ್ದಲ್ಲಿ ದೇಹದ ವಿಶ್ರಾಂತಿ ಕ್ರಿಯೆಯು ಅಧಿಕವಾಗಿ ನಿದ್ರೆಯು ಚೆನ್ನಾಗಿ ಬರುವುದು.
*೬)ಕಿಡ್ನಿಯನ್ನು ಉತ್ತೇಜಿಸುವುದು:*
ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಮೂತ್ರಕೋಶಗಳಿಗೆ ರಕ್ತ ಸಂಚಾರ ಅಧಿಕವಾಗಿ ಮೂತ್ರ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಲ್ಲಿನ ಕಲ್ಮಶಗಳು ಅಧಿಕವಾಗಿ ಹೊರ ಹಾಕಲ್ಪಡುತ್ತದೆ.