ಕಾರವಾರ:ಇಂದಿರಾ ಗಾಂಧಿಯವರು ಸುಮಾರು 17 ವರ್ಷಗಳವರೆಗೆ ದೇಶವನ್ನು ಮುನ್ನೆಡಿಸಿದ ಆದರ್ಶ ಪ್ರಧಾನಮಂತ್ರಿಯಾಗಿದ್ದರು, ಊಳುವವನೇ ಒಡೆಯ ಎಂದು ಕ್ರಾಂತಿಕಾರಿ ಭೂಕಾಯಿದೆ ಜಾರಿಗೆ ತಂದಂತಹ, ಬಡವರ ಕಲ್ಯಾಣಕ್ಕಾಗಿ 21 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದಂತಹ, ಬ್ಯಾಂಕಗಳನ್ನು ರಾಷ್ಟ್ರೀಕೃತ ಮಾಡಿದಂತಹ ಅಲ್ಲದೇ ಇವರ ಕಾಲಾವಧಿಯಲ್ಲಿ ಆದ ಅನೇಖ ಪ್ರಮುಖ ಘಟನೆಗಳನ್ನು ಅಭಿವೃದ್ಧಿಗಳನ್ನು ಉಲ್ಲೇಖಿಸಿದ ಶಾಸಕರು ಪ್ರಿಯದರ್ಶಿನಿ ಎಂದು ಖ್ಯಾತಿವೆತ್ತ ಇಂದಿರಾರವರ ಆದರ್ಶಗಳೇ ನಮಗೆ ದಾರಿದೀಪವಾಗಿದೆ ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಮುನ್ನಡೆಯುವ ಅವಶ್ಯಕತೆ ಇದೆ ಎಂದು ಕಾರವಾರ-ಅಂಕೋಲಾ ಶಾಸಕರಾದ ಸತೀಶ ಕೆ. ಸೈಲ್ ರವರು ಹೇಳಿದರು. ದೇಶದ ಪ್ರಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂರವರ ಪುತ್ರಿ ದಿ.ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವವನ್ನು ಕಾರವಾರ ಕೋಣೆಯ ಗಾಂಧಿನಗರದಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರೊಡನೆ ಆಚರಿಸಿದ ಅವರು ಮಾತನಾಡಿದರು.

RELATED ARTICLES  ಬಿಸಿಲ ಬೇಗೆ ತಣಿಸಿದ ಮಳೆರಾಯ : ಇನ್ನೂ ಎರಡು ದಿನ ಇರಲಿದೆ ವರುಣನ ಅಬ್ಬರ.

ಸದರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಮನೆಯನ್ನು ನಡೆಸುವ ಮಹಿಳೆ ದೇಶವನ್ನೇ ನಡೆಸಬಲ್ಲಳು ಎಂದು ಜಗತ್ತಿಗೆ ಸಾರಿದ ದಿಟ್ಟ ಮಹಿಳೆ ದಿ. ಶ್ರೀಮತಿ ಸಾರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಕೆ ಶಂಭುಶೆಟ್ಟಿ, ಜಿಲ್ಲಾ ಕಾಂಗ್ರೇಸ್ ಮೀನುಗಾರರ ಅಧ್ಯಕ್ಷರಾದ ಗಣಪತಿ ಮಾಂಗ್ರೆ, ಕೆಡಿಎ ಅಧ್ಯಕ್ಷರಾದ ಸಂದೀಪ ತಳೇಕರ, ನಗರಸಭಾ ಉಪಧ್ಯಕ್ಷೆ ಲೀಲಾಬಾಯಿ ಠಾಣೇಕರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಠ್ಠಲ ಸಾವಂತ, ನಗರಸಭೆ ಸದಸ್ಯೆಯರಾದ ನೇಹಾ ನಾಯ್ಕ, ಛಾಯಾ ಜಾವಕರ, ಸದಸ್ಯರಾದ ಪ್ರೇಮಾನಂದ ಗುನಗಾ, ಪಾಂಡುರಂಗ ರೇವಂಡಿಕರ, ರತ್ನಾಕರ ನಾಯ್ಕ, ಹಣಕೋಣ ಗ್ರಾ.ಪಂ. ಅಧ್ಯಕ್ಷೆ ಚಿತ್ರಾಂಗಿ ನಾಯ್ಕ, ಚಿತ್ತಾಕುಲಾ ಗ್ರಾ.ಪಂ. ಸದಸ್ಯರಾದ ಸೂರಜ್ ದೇಸಾಯಿ, ಸೈರಾಬಾನು, ಸ್ನೇಹ ಹಳದನಕರ, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಎಮ್.ವಿ. ಶೇಖ್, ಅಂಚೇಕರ, ಮಖ್‍ಬೂಲ್ ಶೇಖ್, ದೇವಾನಂದ ಠಾಣೆಕರ, ಮಹೇಶ ನಾಯ್ಕ, ಪ್ರ್ಯಾಂಕಿ ಗುಡಿನೊ, ಗಣಪತಿ ಬಾನವಳಿ ಮುಂತಾದವರಿದ್ದರು.

RELATED ARTICLES  ದೇಶಪಾಂಡೆ ಬಗ್ಗೆ ಅನಂದ ಅಸ್ನೋಟಿಕರ್ ಹೇಳಿಕೆ: ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು.