ಯಲ್ಲಾಪುರ: ಸಾರಾಯಿ ಚಟಕ್ಕೆ ದಾಸನಾಗಿದ್ದ ವೃದ್ಧ ವ್ಯಕ್ತಿಯೊಬ್ಬ ಸಾರಾಯಿ ಬಿಡುವಂತೆ ಮನೆಯವರು ಹೇಳಿದ ಸಲಹೆಯನ್ನು ಮನಸ್ಸಿಗೆ ಹಚ್ಚಿಕೊಂಡು, ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ಸಂಜೆ ಯಲ್ಲಾಪುರದ ಮಚ್ಚಿನಲ್ಲಿ ಚರ್ಚ್ ರೋಡ್ ಮನೆಯೊಂದರಲ್ಲಿ ಸಂಭವಿಸಿದೆ.

ಚರ್ಚ್ ರೋಡ್ ನಿವಾಸಿ ಹುಲಿಗೆಪ್ಪ ನಾಗಪ್ಪ ಉಣಕಲ್ (65) ಎನ್ನುವ ವ್ಯಕ್ತಿಯೇ ಆತ್ಮಹತ್ಯೆಗೆ ಶರಣಾಗಿದ್ದು, ರವಿವಾರ ಬೆಳಿಗ್ಗೆಯಿಂದಲೂ ಸರಾಯಿ ಕುಡಿದು ಕೊಂಡಿದ್ದ ಆತ ತನ್ನ ಅಣ್ಣನ ಮನೆಯಾದ ಮಂಜುನಾಥ ನಗರಕ್ಕೆ ಬಂದು ಮಧ್ಯಾಹ್ನ ಊಟ ಮಾಡಿ ಹೋಗಿದ್ದನು ಎಂದು ಮೃತನ ಅಣ್ಣ ತಿಳಿಸಿದ್ದಾನೆ. ಆಗಾಗ ಕುಡಿದು ಬಂದು ಮನೆಯವರೊಂದಿಗೆ ಹಾಗೂ ಸಂಬಂಧಿಗಳೊಂದಿಗೆ ತಕರಾರು ತೆಗೆಯುತ್ತಿದ್ದ ಹುಲಿಗೆಪ್ಪ ನಿಗೆ, ಕುಟುಂಬಸ್ಥರು ಬುದ್ಧಿವಾದ ಹೇಳಿ ಕುಡಿಯುವ ಚಟ ಬಿಡುವಂತೆ ತಿಳಿಸಿದ್ದರು. ರವಿವಾರ ಕೂಡ ಅನೇಕ ಜನ ಆತನಿಗೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಅದನ್ನೇ ಮನಸ್ಸಿಗೆ ಹಚ್ಚಿಕೊಂಡ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

RELATED ARTICLES  ಬೆಡ್ ರೂಂಮ್ ನಲ್ಲಿಯೇ ನೇಣಿಗೆ ಶರಣಾದ ಮಹಿಳೆ

ಎಎಚ್ ಸಿ ಪ್ರಮೋದ ವಿ.ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.