ನೀರು ಜೀವನಕ್ಕೆ ತುಂಬಾ ಮುಖ್ಯ. ಬಾಲ್ಯದಲ್ಲಿರುವಾಗಲೇ ನಮಗೆ ನಮ್ಮ ಹೆತ್ತವರು ನೀರು ಜಾಸ್ತಿ ಕುಡಿಯಬೇಕು ಎಂದು ಹೇಳುತ್ತಿದ್ದದ್ದು ಇನ್ನೂ ನೆನಪಿದೆ. ಒಂದು ವೇಳೆ ನೀವು ನೀರನ್ನ ಕುಡಿಯುವುದನ್ನ ಬಿಟ್ಟರೆ ಅನಾರೋಗ್ಯ ಗ್ಯಾರಂಟಿ.
ತಿನ್ನುವುದಕ್ಕೂ, ಕುಡಿಯುವುದಕ್ಕೂ ಒಂದು ಶಿಸ್ತಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ. ಹಲವು ಮಂದಿ ನಿಂತುಕೊಂಡು ನೀರು ಕುಡಿಯುತ್ತಾರೆ. ಆದರೆ ಇದು ತಪ್ಪು. ನಿಂತು ನೀರು ಕುಡಿಯುವುದರಿಂದ ಅನೇಕ ನಷ್ಟಗಳಿವೆ.
ನೀವು ನಿಂತುಕೊಂಡು ಒಂದೇ ಉಸಿರಾಟದ ಮೂಲಕ ನೀರು ಕುಡಿಯುತ್ತೀರಿ. ಈ ವೇಳೆ ಕುಡಿಯುವ ನೀರಿನ ವೇಗವು ತುಂಬಾ ವೇಗವಾಗಿರುತ್ತದೆ. ಆವಾಗ ಹೊಟ್ಟೆಯ ಮೇಲಿನ ಭಾಗವು ಈ ನೀರನ್ನ ಹೀರಿಕೊಳ್ಳುವುದಿಲ್ಲ.
ವೇಗದಲ್ಲಿರುವಾಗ ನೀರು ಹೊಟ್ಟೆಯ ಕೆಳ ಗೋಡೆಯಲ್ಲಿ ಇಳಿಯುತ್ತದೆ. ಈ ರೀತಿಯಾಗಿ ನೀರು ಕುಡಿದರೆ ಹೊಟ್ಟೆಯ ಕೆಳ ಭಾಗದಲ್ಲಿನ ಪ್ರಮುಖ ಅಂಗಗಳಿಗೆ ಹಾನಿಯಾಗುತ್ತದೆ. ಜೊತೆಗೆ ನಿಂತುಕೊಂಡು ನೀರನ್ನು ದೀರ್ಘಕಾಲ ಕುಡಿದರೆ ಜೀರ್ಣಾಂಗ ವ್ಯವಸ್ಥೆ, ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಗಳು ಎದುರಾಗಬಹುದು.
ನೀರನ್ನ ಸುಲಭವಾಗಿ, ಬಾಯಾರಿಕೆ ನೀಗುವಂತೆ ಕುಡಿಯಬೇಕು. ನಿಮ್ಮ ದೇಹದೊಳಗಿರುವ ಪ್ರತಿಯೊಂದು ಅಂಗಾಂಶಗಳಿಗೆ ನೀರು ತಲುಪಬೇಕು. ಇದಕ್ಕಾಗಿ ನೀವು ಕೂತುಕೊಂಡು ನೀರು ಕುಡಿಯಬೇಕು.