ಅತ್ತ ಗಂಡು ಅಲ್ಲದ ಇತ್ತ ಹೆಣ್ಣೂ ಅಲ್ಲದ ತೃತೀಯ ಲಿಂಗಿಗಳು ರೈಲುಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಬಿಕ್ಷೆ ಬೇಡುವುದನ್ನು ನಾವು ಕಾಣುತ್ತಿರುತ್ತೇವೆ. ಇವರುಗಳು ಅಂಗಡಿಗಳಿಗೂ ಚಪ್ಪಾಳೆ ತಟ್ಟುತ್ತಾ ಬಿಕ್ಷೆ ಬೇಡಲು ಬಂದಾಗ ಯಾವೊಬ್ಬನೂ ಕೂಡಾ ಖಾಲಿ ಕೈಯಿಂದ ವಾಪಾಸು ಕಳಿಸುವುದಿಲ್ಲ. ಮುಂಬೈ, ದಿಲ್ಲಿ ಮುಂತಾದ ಮಹಾ ನಗರಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ.

ಶ್ರೀಮಂತ ವರ್ಗದ ಕೆಲವು ಜನರು ತಮ್ಮ ಮನೆಯಲ್ಲಿ ಮಗು ಜನಿಸಿದಾಗ ವಿಶೇಷವಾಗಿ ಇವರುಗಳನ್ನು ಕರೆಸಿ ಹರಸಲು ಹೇಳುತ್ತಾರೆ. ಇದಕ್ಕಾಗಿ ಹೇರಳ ಹಣವನ್ನೂ ಕೊಟ್ಟು ಸಂತೋಷ ಪಡಿಸುತ್ತಾರೆ. ತಮ್ಮ ಮನೆ ಮಗುವನ್ನು ತೃತೀಯ ಲಿಂಗಿಗಳು ಹರಸಿದರೆ ಒಳ್ಳೆಯಾದಾಗುತ್ತದೆ ಎಂಬ ನಂಬಿಕೆ. ಭಿಕ್ಷೆ ಬೇಡಲು ಬಂದಾಗ ಖಾಲಿ ಕೈಯ್ಯಲಿ ಕಳಿಸಿದರೆ, ಕೋಪಗೊಂಡು ಶಾಪ ನೀಡಬಹುದೆಂಬ ಆತಂಕದಲ್ಲಿ ಏನಾದರೂ ಕೊಟ್ಟೇ ಕೊಡುತ್ತಾರೆ. ಮೂಡ ನಂಬಿಕೆಗಳನ್ನು ನಂಬದವರೂ ಕೂಡಾ ಯಾರ ಶಾಪವಾದರೂ ಆಗಬಹುದು ಆದರೆ ಇವರ ಶಾಪ ಬೇಡವೆಂಬ ಭಯದಿಂದಲೂ ಹಾಗೂ ಇನ್ನು ಕೆಲವರು ದೇವರು ಅವರನ್ನು ಈ ರೀತಿಯಾಗಿ ಸೃಷ್ಟಿಸಿರುವ ಕಾರಣ ಕನಿಕರದಿಂದ ಭಿಕ್ಷೆ ಕೊಟ್ಟು ಕಳುಹಿಸುತ್ತಾರೆ.

RELATED ARTICLES  ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ..!

ಆದರೆ ಕೆಲರು, ಇವರು ಭಿಕ್ಷೆ ಬೇಡಲು ಚಪ್ಪಾಳೆ ತಟ್ಟುತ್ತಾ ಬಂದಾಗ ನನಗೆ ನಾಣ್ಯ ಕೊಡು ನಿನಗ ಹೆಚ್ಚಿನ ಹಣ ಕೊಡುತ್ತೇನೆ ಎಂದು ದುಂಬಾಲು ಬೀಳುತ್ತಾರೆ. ಕೆಲವು ತೃತೀಯ ಲಿಂಗಿಗಳು ಮರು ಮಾತನಾಡದೆ ಕೊಟ್ಟು ಬಿಡುತ್ತಾರೆ. ಆದರೆ ಇನ್ನು ಕೆಲವರು ನಾಣ್ಯದ ಬದಲು 200-300 ರೂಪಾಯಿ ಕೊಟ್ಟರೆ ಮಾತ್ರ ಕೊಡುತ್ತೇನೆ ಎಂಬ ಹಠ ಹಿಡಿಯುತ್ತಾರೆ.

ಅಂತಹದ್ದೇನಿದೆ ಆ ನಾಣ್ಯದಲ್ಲಿ?
ಸಾಮಾನ್ಯವಾಗಿ ಭಿಕ್ಷೆ ಬೇಡಲು ಬರುವ ತೃತೀಯ ಲಿಂಗಿಗಳು ತಾವು ಬೇಡಿ ಪಡೆದ ಭಿಕ್ಷೆಯನ್ನು ಹಾಕಿ ಇಡಲು ಒಂದು ಸಣ್ಣ ಬ್ಯಾಗ್ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಕೆಲವು ನಾಣ್ಯಗಳನ್ನೂ ಇಟ್ಟು ಕೊಳ್ಳುತ್ತಾರೆ. ಜನಸಾಮಾನ್ಯರಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ ಇವರಲ್ಲಿ ಈ ನಾಣ್ಯಗಳನ್ನು ಕೇಳಿದಾಗ, ತೃತೀಯ ಲಿಂಗಿಗಳು ಅವರ ಬಳಿಯ ನಾಣ್ಯವನ್ನು ತಮ್ಮ ಬಲ ಕೈಗೆ ಸವರಿ, ನಂತರ ಎಡ ಕೈ ಗೆ ಸವರಿದ ನಂತರ ಅದೇ ನಾಣ್ಯವನ್ನು ತಮ್ಮ ಹಲ್ಲಿನಿಂದ ಕಚ್ಚಿ ಹರಸಿ ಕೊಡುತ್ತಾರೆ. ಹೀಗೆ ಪಡೆದ ನಾಣ್ಯವು ತುಂಬಾ ಲಕ್ಕಿ ಎಂಬ ನಂಬಿಕೆ. ಅಲ್ಲದೆ ಆ ನಾಣ್ಯವನ್ನು ಜೋಪಾನವಾಗಿಟ್ಟುಕೊಳ್ಳುತ್ತಾರೆ. ನಿರ್ಧಿಷ್ಟ ವ್ಯಕ್ತಿಗೆ ನೀಡಿದ ಆ ನಾಣ್ಯವನ್ನು ಬೇರೆ ಯಾರಿಗೂ ಕೊಡಬಾರದು ಎಂಬ ವಾಡಿಕೆ ಇದೆ. ಕಳೆದು ಹೋದರೆ ಚಿಂತಿಸಬೇಕಿಲ್ಲ. ಆದರೆ ಮತ್ತೊಬ್ಬರಿಗೆ ಕೊಡುವಂತ್ತಿಲ್ಲ ಎಂಬ ಪ್ರತೀತಿ. ಈ ನಾಣ್ಯದ ಬದಲು ಕೆಲವರು ಕೊಟ್ಟಷ್ಟೇ ಹಣವನ್ನು ಪಡೆದು ಮುಂದೆ ಸಾಗಿದರೆ, ಇನ್ನು ಕೆಲವರು ಆ ನಾಣ್ಯದ ಬದಲು ದೊಡ್ಡ ಮೊತ್ತದ ಬೇಡಿಕೆ ಇಡುತ್ತಾರೆ. ಆದರೂ ಜನರು ಇವರ ಕೈಯಿಂದ ಹರಸಿದ ನಾಣ್ಯ ಪಡೆಯಲು ಎಷ್ಟು ಬೇಕಾದರೂ ಹನ ನೀಡಲು ಸಿದ್ಧರಿರುವುದು ಸುಳ್ಳಲ್ಲ.

RELATED ARTICLES  ಕೋತಿ ಮರಿಗೆ ಕಣ್ಣೀರ ವಿದಾಯ : ಊಟ ತಿಂಡಿ ಬಿಟ್ಟು ಗೋಳಾಟ

ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂದು ನಾಣ್ಯ ಪಡೆದು ಉದ್ಧಾರ ಆದವರೇ ಹೇಳಬೇಕು.