ಬೀಜಿಂಗ್ : ವಿಶ್ವದ ಯಾವುದೇ ಮೂಲೆಯಲ್ಲಿನ ಗುರಿಯನ್ನು ಭೇದಿಸಬಲ್ಲ ಬಹು ಅಣು ಸಿಡಿತಲೆಯನ್ನು ಹೊತ್ತೂಯ್ಯಬಲ್ಲ ಖಂಡಾಂತರ ಪರಮಾಣು ಕ್ಷಿಪಣಿ “ದಿ ಡಾಂಗ್‌ಫೆಂಗ್-41′ ಮುಂದಿನ ವರ್ಷ ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಸೇರಿಕೊಳ್ಳಲಿದೆ ಎಂದು ಮಾಧ್ಯಮ ವರದಿಗಳು ಇಂದು ಸೋಮವಾರ ತಿಳಿಸಿವೆ.
ದಿ ಡಾಂಗ್‌ಫೆಂಗ್-41 ಹೊಸ ಛೇದಕ ಕ್ಷಿಪಣಿ ಈ ಹಿಂದಿನ ಮ್ಯಾಕ್ 10 ಕ್ಷಿಪಣಿಗಿಂತಲೂ ಹೆಚ್ಚಿನ ವೇಗವನ್ನು ಹೊಂದಿದೆ ಮತ್ತು ಶತ್ರುಗಳ ಕ್ಷಿಪಣಿ ಎಚ್ಚರಿಕೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಇದು ಮಾರುವೇಷದ ಉಪಕರಣಗಳನ್ನು ಬಳಸಿ ಶತ್ರುಗಳನ್ನು ಸುಲಭದಲ್ಲಿ ಮೋಸ ಮಾಡುವ ತಂತ್ರಗಾರಿಕೆಯನ್ನು ಹೊಂದಿದೆ.
2012ರಷ್ಟು ಹಿಂದೆಯೇ ಘೋಷಿಸಲ್ಪಟ್ಟಿದ್ದ ಈ ನೂತನ ಕ್ಷಿಪಣಿಯನ್ನು ಈ ತನಕ ಎಂಟು ಬಾರಿ ಪರೀಕ್ಷಾರ್ಥವಾಗಿ ಉಡಾಯಿಸಲಾಗಿದೆ. 2018ರ ಮೊದಲ ಅರ್ಧದೊಳಗಾಗಿ ಈ ನೂತನ ಕ್ಷಿಪಣಿಯು ಚೀನೀ ಸೇನೆ ಪಿಎಲ್‌ಎ ಸೇರಿಕೊಳ್ಳಲಿದೆ ಎಂದು ಸರಕಾರಿ ಒಡೆತನ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.